ಜೆಡಿಎಸ್ ಸೇರ್ಪಡೆ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ ಸಂಸದ ಪ್ರತಾಪ್ ಸಿಂಹ: ಏನ್ ಹೇಳಿದ್ರು ಗೊತ್ತಾ..!

BREAKING NEWS, Kannada News, Regional No Comments on ಜೆಡಿಎಸ್ ಸೇರ್ಪಡೆ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ ಸಂಸದ ಪ್ರತಾಪ್ ಸಿಂಹ: ಏನ್ ಹೇಳಿದ್ರು ಗೊತ್ತಾ..! 40

ಮೈಸೂರು: ಮಾಜಿ ಸಂಸದ ವಿಶ್ವನಾಥ್ ಅವರ ಕಾಲು ಮುಟ್ಟಿ ಸಮಸ್ಕರಿಸಿ, ತಬ್ಬಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಪ್ರತಾಪ್ ಸಿಂಹ ಅವರು ಜೆಡಿಎಸ್ ಸೇರ್ಪಡೆಗೊಳ್ಳುತ್ತಾರೆ ಎಂಬ ಗಾಳಿ ಸುದ್ದಿ ಕಳೆದೆರೆಡು ದಿನಗಳಿಂದ ಹರಿದಾಡುತ್ತಿತ್ತು. ಇದಕ್ಕೆ ಬಿಜೆಪಿ ಸಂಸದ ಪ್ರತಾಪಸಿಂಹ ಅವರು ಸ್ಪಷ್ಟನೆ ನೀಡಿದ್ದಾರೆ.

ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಅವರು ಈ ರೀತಿ ಬರೆದುಕೊಂಡಿದ್ದಾರೆ.

ಮೈಸೂರಿನಲ್ಲಿ ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ, ವಿವಿಧ ಪುರಸಭೆ ಹಾಗು ನಗರಸಭೆಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಿದೆ. ಹಾಗಾಗಿ ನಮಗೆ ೩ ಸಲ ಉಪಮೇಯರ್, ಕೆಲ ಕಡೆ ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನ, ಸ್ಥಾಯಿ ಸಮಿತಿ ಸಿಕ್ಕಿದೆ. ಹುಣಸೂರಿನಲ್ಲಿ ಪಕ್ಷಾಂತರದ ಪಿಡುಗು ಹೆಚ್ಚಿದ್ದು ಕಳೆದ ಒಂದೂವರೆ ವರ್ಷದಲ್ಲಿ ಎರಡು ಬಾರಿ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಎರಡು ಸಲವೂ ಮೈತ್ರಿಕೂಟದ ಪರವಾಗಿ ವೋಟು ಹಾಕಿದ್ದೆದ್ದೇನೆ. ಈ ಬಾರಿ ಜೆಡಿಎಸ್ ಬಣದ ಪರವಾಗಿ ನಿಂತ ಶಿವಕುಮಾರ್ ಹಾಗು ಕಾಂಗ್ರೆಸ್ ಬಣದ ಅಭ್ಯರ್ಥಿ ಸೌರಭ ಸಿದ್ದರಾಜು ಇಬ್ಬರೂ ಕಾಂಗ್ರೆಸ್ಸಿಗರೇ! ಈ ಕಾಂಗ್ರೆಸ್ ಅಭ್ಯರ್ಥಿ ಕಡೆಯವರು ನಮ್ಮ ಹನುಮ ಭಕ್ತರರಿಗೆ ಎಂಥ ಉಪದ್ರವ ಕೊಟ್ಟಿದ್ದರು ಎಂಬುದು ಹುಣಸೂರಿಗೆ ಗೊತ್ತು. ಹಾಗಾಗಿ ಕುಷ್ಟಗಿಯಿಂದ ರಾತ್ರಿ ಹೊರಟು ಬೆಳಗಿನ ಜಾವ ಕಸಾಯಿಖಾನೆಗೆ ತೆರಳುತ್ತಿದ್ದ ೧೬ ಪಶುಗಳನ್ನು ನಮ್ಮ ಯುವಮೋರ್ಚಾದ ಶೇಖರ್, ದರ್ಶನ, ಡ್ರೈವರ್ ಸಹಾಯದಿಂದ ರಕ್ಷಿಸಿ ನೇರವಾಗಿ ಹುಣಸೂರಿಗೆ ಬಂದು ಹನುಮಭಕ್ತರ ವಿರೋಧಿಗಳಿಗೆ ವೋಟಿನ ಮೂಲಕ ಪಾಠ ಕಳಿಸಿ ಹೊರಬಂದಾಗ, “ಪ್ರತಾಪ್ ಸಿಂಹನಿಗೆ ಜೈ” ಎಂಬ ಘೋಷಣೆ ಮೊಳಗಿತು. ಮುಂದೆ ಬರುತ್ತಿರುವಾಗ ಮಾಜಿ ಸಂಸದ ವಿಶ್ವನಾಥರು ಎದುರಾದರು, ಕಾಲು ಮುಟ್ಟಿ ಸಮಸ್ಕರಿಸಿದೆ (ಸಂಘದ ಸಂಸ್ಕಾರ). ನನ್ನನ್ನು ತಬ್ಬಿಕೊಂಡರು. ಆ ಫೋಟೋ ಹಾಕಿ ಇಲ್ಲದ ಗುಲ್ಲೆಬ್ಬಿಸಬೇಡಿ. ಮೋದಿಜಿಯನ್ನು ಹೊಗಳಿ, ಸತತವಾಗಿ ಅವರ ಪರವಾಗಿ ಬರೆದ (೨೦೦೪, ಜೂನ್ ೧೯ ರಿಂದ) ಮೊದಲ ಕನ್ನಡ ಬರಹಗಾರ ಹಾಗು ಮೋದಿಜಿ ಆತ್ಮಚರಿತ್ರೆ ಬರೆದ ಮೊಟ್ಟಮೊದಲ ಲೇಖಕ ನಾನು. ಸಾಯುವವರೆಗೂ ನಾನು ವಿಶ್ವೇಶ್ವರ ಭಟ್ ಮತ್ತು ಮೋದಿಜಿ ನಿಷ್ಠ. ಜನವರಿ ೨೭ಕ್ಕೆ ಹನುಮ ಜಯಂತಿ ಮೆರವಣಿಗೆ ಇದೆ. ಬಂದು ಕಣ್ಣಾರೆ ಕಂಡು ಆನಂದಿಸಿರಂತೆ. ವದಂತಿ ಬಿಡಿ.

https://m.facebook.com/story.php?story_fbid=2010451135881901&id=1408585776068443

Related Articles

Leave a comment

Back to Top

© 2015 - 2017. All Rights Reserved.