ದೂರು ನೀಡಲು ಬಂದವನ ಬಂಧನ: ರಾತ್ರೋರಾತ್ರಿ ಬಿಜೆಪಿ ಪ್ರತಿಭಟನೆ

BREAKING NEWS, Kannada News, Regional, Top News No Comments on ದೂರು ನೀಡಲು ಬಂದವನ ಬಂಧನ: ರಾತ್ರೋರಾತ್ರಿ ಬಿಜೆಪಿ ಪ್ರತಿಭಟನೆ 15

ಮೈಸೂರು: ದೂರು ನೀಡಲು ತೆರಳಿದ ವಕೀಲನನ್ನು ಬಂಧಿಸಿದ್ದನ್ನು ಖಂಡಿಸಿ ಪೊಲೀಸ್ ಠಾಣೆ ಎದುರು ಬಿಜೆಪಿ ರಾತ್ರೋರಾತ್ರಿ ಪ್ರತಿಭಟನೆ ನಡೆಸಿದೆ.

ನಗರದ ನಜರ್‍ಬಾದ್ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದ ವಕೀಲ, ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗೋಕುಲ್ ಗೋವರ್ಧನ್‍ನನ್ನು ಪೊಲೀಸರು ಬಂಧಿಸಿದ್ದರು.

ಮುಡಾ ಖಾಲಿ ನಿವೇಶನ ಸಂಬಂಧ ಗೋಕುಲ್ ದೂರು ನೀಡಲು ತೆರಳಿದ್ದರು. ಈ ವೇಳೆ ಇನ್ಸ್’ಪೆಕ್ಟರ್ ಶೇಖರ್ ಹಾಗೂ ಗೋಕುಲ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಇನ್ಸ್ ಪೆಕ್ಟರ್ ಶೇಖರ್ ಗೋಕುಲ್ ರನ್ನು ಬಂಧಿಸಿ ಮಾಡಿ ಸೆಲ್‍ಗೆ ಹಾಕಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ ಗೋಕುಲ್ ಬಿಡುಗಡೆ ಮಾಡುವಂತೆ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಠಾಣೆ ಮುಂದೆ ಧರಣಿ ಕುಳಿತರು. ಬಳಿಕ ಬಿಜೆಪಿ ಕಾರ್ಯಕರ್ತರು ನಜರ್‍ಬಾದ್ ಪೊಲೀಸ್ ಠಾಣೆ ಮುಂಭಾಗ ರಸ್ತೆ ತಡೆ ನಡೆಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.