ಇಂದು ನಟಿ ಭಾವನಾ ಮೆನನ್’ರ ಮದುವೆ ಸಂಭ್ರಮ: ಮೆಹಂದಿ ಶಾಸ್ತ್ರ ಫೋಟೋಗಲ್ಲಿ ನೋಡಿ

BREAKING NEWS, Entertainment, Kannada News No Comments on ಇಂದು ನಟಿ ಭಾವನಾ ಮೆನನ್’ರ ಮದುವೆ ಸಂಭ್ರಮ: ಮೆಹಂದಿ ಶಾಸ್ತ್ರ ಫೋಟೋಗಲ್ಲಿ ನೋಡಿ 203

ಕೊಚ್ಚಿ: ಬಹುಭಾಷಾ ನಟಿ ಭಾವನಾ ಮೆನನ್ ಅವರು ಕನ್ನಡ ಸಿನಿಮಾ ನಿರ್ಮಾಪಕ ನವೀನ್ ಜತೆ ಇಂದು ವಿವಾಹ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಕೇರಳದ ತ್ರಿಶ್ಶೂರ್ ನ ಜವರ್’ಲಾಲ್ ಕನ್ವೇಚನ್ ಹಾಲ್ ನಲ್ಲಿ ಮದುವೆ ಸಮಾರಂಭ ನಡೆಯುತ್ತಿದ್ದು, ಈ ಅದ್ಧೂರಿ ಕಾರ್ಯಕ್ರಮದಲ್ಲಿ ಕೇವಲ ಆಪ್ತೇಷ್ಟರು ಮಾತ್ರ ಭಗವಹಿಸಿದ್ದಾರೆ. ಆದರೆ ಸಮಾರಂಭಕ್ಕೆ ಮಾಧ್ಯಮಗಳಿಗೆ ಪ್ರವೇಶವಿಲ್ಲ. ಹಾಗಿದ್ದರೂ ಭಾವನಾ ಅವರು ಸಾಮಾಜಿಕ ಜಾಲತಾಣದಲ್ಲಿ ಮೆಹಂದಿ ಶಾಸ್ತ್ರದ ಫೋಟೋಗಳನ್ನು ಹಾಕಿದ್ದಾರೆ.

ಒಂದು ವರ್ಷದ ಹಿಂದೆ ಇವರಿಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನವೀನ್ ಕನ್ನಡದಲ್ಲಿ ‘ರೋಮಿಯೋ’ ಸಿನಿಮಾ ನಿರ್ಮಿಸಿದ್ದರು. ಈ ಸಿನಿಮಾಗೆ ಭಾವನಾ ನಾಯಕಿ. ಈ ಸಂದರ್ಭದಲ್ಲಿ ಇವರಿಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ `ಜಾಕಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ಆಗಿ, ನಂತರ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ `ರೋಮಿಯೊ’, ಕಿಚ್ಚ ಸುದೀಪ್‍ನ ಅಭಿನಯದ `ವಿಷ್ಣುವರ್ಧನ್’ ಹಾಗೂ `ಬಚ್ಚನ್’ ಚಿತ್ರಗಳು ಹಾಗೂ ಟಗರು ಸೇರಿದಂತೆ ಮತ್ತಿತರ ಚಿತ್ರಗಳಲ್ಲಿ ಭಾವನ ಅಭಿನಯಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.