ನಟಿ ತಮನ್ನಾ ಮೇಲೆ ಚಪ್ಪಲಿ ಎಸೆತ

BREAKING NEWS, Entertainment, Kannada News No Comments on ನಟಿ ತಮನ್ನಾ ಮೇಲೆ ಚಪ್ಪಲಿ ಎಸೆತ 22

ಹೈದರಾಬಾದ್: ತೆಲುಗು ನಟಿ ತಮನ್ನಾ ಭಾಟಿಯಾ ಮೇಲೆ ವ್ಯಕ್ತಿಯೊಬ್ಬರು ಚಪ್ಪಲಿ ಎಸೆಯಲು ಯತ್ನಿಸಿದ ಘಟನೆಯೊಮದು ನಡೆದಿದೆ.

ಇಲ್ಲಿನ ಹಿಮ್ಮತ್‌ನಗರದ ಚಿನ್ನಾಭರಣ ಮಳಿಗೆ ಉದ್ಘಾಟನೆಗೆ ಆಗಮಿಸಿದ್ದ ತಮನ್ನಾಗೆ ಬಿಟೆಕ್ ಪದವೀಧರ, ಮುಶೀರಾಬಾದ್ ನಿವಾಸಿ ಕರಿಮುಲ್ಲಾ ಎಂಬಾತ ಚಪ್ಪಲಿ ಎಸೆದಿದ್ದಾನೆ.

ಮಳಿಗೆಯಿಂದ ಹೊರಬರುವ ವೇಳೆ ತಮನ್ನಾಗೆ ಗುರಿಯಿಟ್ಟು ಕರಿಮುಲ್ಲಾ ಚಪ್ಪಲಿ ಎಸೆದಿದ್ದ. ಆದರೆ ಅದು ಗುರಿ ತಪ್ಪಿ ಮಳಿಗೆಯ ಸಿಬ್ಬಂದಿ ಮೇಲೆ ಬಿದ್ದಿದೆ. ತಕ್ಷಣವೇ ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ತಮನ್ನಾರ ಇತ್ತೀಚಿನ ಚಿತ್ರಗಳ ನಟನೆಯ ಬಗ್ಗೆ ಕರಿಮುಲ್ಲಾ ಆಕ್ಷೇಪ ಹೊಂದಿದ್ದ ಎನ್ನಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.