ಅತ್ಯಾಚಾರ ಆರೋಪ: ಕನ್ನಡದ ಪ್ರತಿಷ್ಠಿತ ಸುದ್ದಿ ವಾಹಿನಿಯ ಮೈಸೂರು ವರದಿಗಾರನ ವಿರುದ್ಧ ದೂರು ದಾಖಲು

BREAKING NEWS, Crime, Kannada News, Regional, Top News No Comments on ಅತ್ಯಾಚಾರ ಆರೋಪ: ಕನ್ನಡದ ಪ್ರತಿಷ್ಠಿತ ಸುದ್ದಿ ವಾಹಿನಿಯ ಮೈಸೂರು ವರದಿಗಾರನ ವಿರುದ್ಧ ದೂರು ದಾಖಲು 145

ಮೈಸೂರು: ರಾಜ್ಯದ ಪ್ರಮುಖ ಸುದ್ದಿವಾಹಿನಿಯ ವರದಿಗಾರನೊಬ್ಬ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ನನ್ನನ್ನು ರೇಪ್​ ಮಾಡಿದ್ದಾನೆ ಎಂದು ಮಹಿಳಾ ಸಬ್​ ಇನ್ಸ್​ಪೆಕ್ಟರ್​ ಒಬ್ಬರು ಪೊಲಿಸರಿಗೆ ದೂರು ನೀಡಿದ್ದಳೆ.

ಹೌದು ಮೈಸೂರಿನ Tv9 ವರದಿಗಾರ ರಾಮ್ ಅವರ ಮೇಲೆ ಈ ಆರೋಪ ಕೇಳಿಬಂದಿದ್ದು ಮಹಿಳಾ ಪೊಲೀಸ್ ಸಬ್​ ಇನ್ಸ್​ ಪೆಕ್ಟರ್​ ಒಬ್ಬರು ದೂರು ನೀಡಿದ್ದಾರೆ. ಪ್ರತಿಷ್ಠಿತ ಖಾಸಗೀ ವಾಹಿನಿ ಮೈಸೂರಿನ ವರದಿಗಾರ ರಾಮುವಿನ ಮೇಲೆ ಕೇಸ್​ ದಾಖಲಿಸಿಕೊಳ್ಳಲು ಪ್ರಾರಂಭದಲ್ಲಿ ಪೊಲೀಸರೇ ಮೀನಾ ಮೇಷ ಏಣಿಸಿದರಂತೆ ಆದರೆ ಖಡಕ್​ ಪೊಲಿಸ್​ ಅಧಿಕಾರಿಯೊಬ್ಬರ ಮಧ್ಯ ಪ್ರವೇಶದಿಂದ ಈ ಪ್ರಕರಣದಲ್ಲಿ ಎಫ್​ಐಆರ್​ ದಾಖಲಾಗಿದೆ.

ಎಸ್​ಪಿ ಕಚೇರಿಯಲ್ಲಿ ಸಬ್​ ಇನ್ಸ್​ಪೆಕ್ಟರ್​ ಯಾಸ್ಮಿನ್​ ತಾಜ್​ ಎಂಬುವವರನ್ನು ಮದುವೆಯಾಗುವುದಾಗಿ ನಂಬಿಸಿ ಈ ರಾಮ್​ ಎಂಬುವ ವ್ಯಕ್ತಿ ಆಕೆಯೊಂದಿಗೆ ಲೈಂಗಿಕ ಸುಖವನ್ನು ಅನುಭವಿಸಿ ಈಗ ಮದುವೆಯಾಗುವುದಕ್ಕೆ ಹಿಂದೆ ಸರಿದಿರುವ ಕಾರಣದಿಂದಾಗಿ ಈತನ ಮೇಲೆ ನಂಬಿಕೆ ದ್ರೋಹ ಮತ್ತು ಮೋಸ ಎಂದು 376, 420 ಕಾಯ್ದೆಯಡಿ ಕೇಸ್​ ದಾಖಲಿಸಲಾಗಿದೆ. ಈಕೆಯನ್ನು ಪುಸಲಾಯಿಸಿ ಪ್ರೇಮದ ನಾಟಕವಾಡಿ ಮದುವೆಯಾಗು ಎಂದಾಗ ಈತ ಕಾಲ್ಕಿತ್ತಿದ್ದಾನೆ ಎಂದು ಆರೋಪಿಸಲಾಗಿದೆ.

ಮಹಿಳಾ ಸಬ್​ ಇನ್ಸ್​ಪೆಕ್ಟರ್​ಗೂ ಮದುವೆಯಾಗಿ ಮಕ್ಕಳಿದ್ದು ರಾಮು ಗೂ ಕೂಡ ಮದುವೆಯಾಗಿದೆ. ಆದರೆ ಆ ಮಾಹಿತಿ ತಿಳಿದುಕೋಂಡ ರಾಮು ಮಹಿಳಾ ಸಬ್​ ಇನ್ಸ್​ಪೆಕ್ಟರ್ ಅನ್ನು ಪುಸಲಾಯಿಸಿ ಆಕೆಯೊಂದಿಗೆ ಮದುವೆಯಾಗುವುದಾಗಿ ತಿಳಿಸಿ ಲೈಂಗಿಕ ಸುಖಕ್ಕಾಗಿ ಬಳಸಿಕೊಂಡಿದ್ದಾನೆ ಎಂದು ಎಫ್​ಐಆರ್​ ನಲ್ಲಿ ಹೇಳಲಾಗಿದೆ.​

ಆದರೆ ಪಟ್ಟು ಬಿಡದ ಪೊಲೀಸ್​ ಸಬ್​ ಇನ್ಸ್​ ಪೆಕ್ಟರ್​ ಯಾಸ್ಮೀನ್​ ತಮಗಾಗಿರು ಅನ್ಯಾಯಕ್ಕಾಗಿ ಮತ್ತೊಂದು ಉದಯಗಿರಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿ ಕಾನೂನು ಸಮರಕ್ಕೆ ಇಳಿದಿದ್ದಾರೆ. ಕೇಸ್​ ದಾಖಲಾಗಿದೆ ಎಂದು ತಿಳಿಯುತ್ತಿದ್ದಂತೆ ತಲೆ ಮರೆಸಿಕೊಂಡಿರುವ ರಾಮ್​ ಎಲ್ಲಿದ್ದಾರೆ ಎಂಬ ಮಾಹಿತಿ ಯಾರಿಗೂ ಇಲ್ಲದಂತಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಯಾದಗಿರಿ​ ಠಾಣೆಯ ಪೊಲೀಸರು ಪ್ರಕರಣ ಎಫ್​ಐಆರ್​ ಆಗಿದೆ ಇದನ್ನು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.