ಪತೀತರನ್ನು ಪಾವನರನ್ನಾಗಿ ಮಾಡಿದ ಕೀರ್ತಿ ಮದ್ವಚಾರ್ಯ ರಿಗೆ ಸಲ್ಲುತ್ತದೆ ಎಂ.ಕೆ ಸೋಮಶೇಖರ್

Kannada News, Regional No Comments on ಪತೀತರನ್ನು ಪಾವನರನ್ನಾಗಿ ಮಾಡಿದ ಕೀರ್ತಿ ಮದ್ವಚಾರ್ಯ ರಿಗೆ ಸಲ್ಲುತ್ತದೆ ಎಂ.ಕೆ ಸೋಮಶೇಖರ್ 24

ಮೈಸೂರು: ಮೈಸೂರು ಜಿಲ್ಲಾ ಬ್ರಾಹ್ಮಣ ಯುವವೇದಿಕೆಯಿಂದ ಜರುಗಿದ ಆಚಾರ್ಯ ತ್ರಯರಲ್ಲಿ ಒಬ್ಬರಾದ ಮದ್ವಚಾರ್ಯರ ಜಯಂತಿ ಅಂಗವಾಗಿ ಕೃಷ್ಣಮೂರ್ತಿಪುರಂ ನಲ್ಲಿನ ರಾಮಮಂದಿರದಲ್ಲಿ ಜರುಗಿತು.

ಮದ್ವರಥಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರಾದ ಎಂ ಕೆ ಸೋಮಶೇಖರ್ ಅವರು ರಮಾನುಜಾಚಾರ್ಯರು ತಮಿಳು ಮೂಲದವರು, ಶಂಕರಾಚಾರ್ಯರು ಕೇರಳ ಮೂಲದವರು ಹಾಗೂ ಅವರು ಸಂಸ್ಕೃತ ಮತ್ತಿತರರ ಭಾಷೆಗಳಲ್ಲಿ ಸ್ಮೃತಿ ಪೂಜಾ ಕಾರ್ಯ ಪಠಣೆಗಳನ್ನು ಮಾಡುತಿದ್ದರು. ಆದರೆ ಕನ್ನಡದಲ್ಲಿ ಮಾಡಿದ ಕೀರ್ತಿ ಮಧ್ವರದು. 13-14ನೇ ಶತಮಾನದಲ್ಲಿ ದಲಿತರು, ಹಿಂದುಳಿದವರು, ಮತ್ತಿತರರನ್ನು ಅಪ್ಪಿಕೊಳ್ಳುವ ಮೂಲಕ ಅಂದೆಯೇ ಮಡಿವಂತಿಕೆ ದೂರ ಮಾಡಿದ ಕೀರ್ತಿ ಮದ್ವಚಾರ್ಯರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಜೀವ್, ಮೋಹನ್ ಕುಮಾರ್, ಅಜಯ್ ಶಾಸ್ತ್ರಿ, ವಿನಯ್ ಕಣಗಲ್, ಮನು, ವಿಕ್ರಂ ಮತ್ತಿತರರು ಭಾಗವಹಿಸಿದ್ದರು ಹಾಗೂ ನೂರಾರು ಮಹಿಳೆಯರು ರಸ್ತೆಯುದ್ದಕ್ಕೂ ಭಜನೆ ಮಾಡಿದರು.

Related Articles

Leave a comment

Back to Top

© 2015 - 2017. All Rights Reserved.