ಪಾಕಿಸ್ತಾನವನ್ನು ಬಗ್ಗುಬಡೆದು ಪೈನಲ್ ಪ್ರವೇಶಿಸಿದ ಭಾರತ

BREAKING NEWS, Kannada News, Sports, Top News No Comments on ಪಾಕಿಸ್ತಾನವನ್ನು ಬಗ್ಗುಬಡೆದು ಪೈನಲ್ ಪ್ರವೇಶಿಸಿದ ಭಾರತ 19

ಕ್ರೈಸ್ಟ್’ಚರ್ಚ್: ನ್ಯೂಜಿಲೆಂಡ್’ನಲ್ಲಿ ನಡೆಯುತ್ತಿರುವ ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಬಗ್ಗುಬಡೆದ ಭಾರತ ತಂಡ ಮತ್ತೆ ಫೈನಲ್ ಪ್ರವೇಶಿಸಿದೆ.

ಭಾರತ ನೀಡಿದ 273 ರನ್ ಗಳ ಗುರಿಯನ್ನು ಬೆನ್ನುಹತ್ತಿದ ಪಾಕಿಸ್ತಾನ ತಂಡ ಕೇವಲ 29.3 ಓವರ್ ಗಳಲ್ಲಿ 69 ರನ್ ಗಳಿಸಿ ಆಲೌಟ್ ಆಯಿತು. ಈ ಮೂಲಕ ಭಾರತ ತಂಡ ಮತ್ತೆ ಅಂಡರ್ 19 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶ ಮಾಡಿದೆ.

ಭಾರತದ ಪರ ಇಶಾನ್ ಪೊರೆಲ್ 4 ವಿಕೆಟ್ ಕಬಳಿಸಿ ಪಾಕಿಸ್ತಾನದ ಪತನಕ್ಕೆ ಕಾರಣರಾದರು. ಜೊತೆಗೆ ಶಿವಸಿಂಗ್ ಮತ್ತು ರಿಯಾನ್ ಪರಾಗ್ ತಲಾ 2 ವಿಕೆಟ್ ಮತ್ತು ಅಂತಿಮ ಹಂತದಲ್ಲಿ ಸುಧಾಕರ್ ರಾಯ್ ಮತ್ತು ಅಭಿಷೇಕ್ ಶರ್ಮಾ ತಲಾ 1ವಿಕೆಟ್ ಕಬಳಿಸುವ ಕಬಳಿಸುವ ಮೂಲಕ ಪಾಕಿಸ್ತಾನದ ಸೋಲಿಗೆ ಕಾರಣರಾದರು.

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 272 ರನ್ ಕಲೆ ಹಾಕಿತ್ತು. ಆರಂಭಿಕರಾದ ಪೃಥ್ವಿ ಶಾ (41 ರನ್) ಮತ್ತು ಮನೋಜ್ ಕಲ್ರಾ (47 ರನ್) ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ಭರ್ಜರಿ ಶತಕ (102 ರನ್)ದ ಇನ್ನಿಂಗ್ಸ್ ಕಟ್ಟಿದ ಶುಭ್ಮನ್ ಗಿಲ್ ಭಾರತ ಸವಾಲಿನ ಗುರಿ ಕಲೆಹಾಕಲು ನೆರವಾದರು.

ಸಂಕ್ಷಿಪ್ತ ಸ್ಕೋರ್:

ಭಾರತ: 50 ಓವರ್ ಗಳಲ್ಲಿ 272

ಪಾಕಿಸ್ತಾನ: 29.3 ಓವರ್ ಗಳಲ್ಲಿ 69 ರನ್

Related Articles

Leave a comment

Back to Top

© 2015 - 2017. All Rights Reserved.