ಸಿ.ಟಿ ರವಿ’ಗೆ ಕೊಲೆ ಬೆದರಿಕೆ ಪತ್ರ

BREAKING NEWS, Crime, Kannada News, Regional, Top News No Comments on ಸಿ.ಟಿ ರವಿ’ಗೆ ಕೊಲೆ ಬೆದರಿಕೆ ಪತ್ರ 32

ಚಿಕ್ಕಮಗಳೂರು: ಶಾಸಕ ಹಾಗೂ ಮಾಜಿ ಸಚಿವ ಸಿ.ಟಿ ರವಿ ಅವರಿಗೆ ಕೊಲೆ ಬೆದರಿಕೆ ಪತ್ರ ಬಂದಿದೆ.

ಚಿಕ್ಕಮಗಳೂರಿನ ಬಸವನಹಳ್ಳಿ ರಸ್ತೆಯಲ್ಲಿರುವ ಅವರ ಕಚೇರಿಗೆ ಅಂಚೆ ಮೂಲಕ ಎರಡು ಪುಟಗಳ ಪತ್ರವನ್ನು ಕಳುಹಿಸಲಾಗಿದೆ. ಬೆದರಿಕೆ ಪತ್ರದಲ್ಲಿ ಸಿ ಟಿ ರವಿ ಅವರನ್ನು ಕೊಲೆ ಮಾಡುವುದಾಗಿ ಉಲ್ಲೇಖಿಸಿದ್ದು, ಬೆದರಿಕೆ ಪತ್ರದ ಜೊತೆಗೆ ಪರ್ವೇಜ್ ಎಂಬಾತನ ಫೋಟೋ ಲಗತ್ತಿಸಲಾಗಿದೆ.

ಗೌರಿ ಲಂಕೇಶ್, ಕಲಬುರ್ಗಿ ಹತ್ಯೆ ಮಾಡಿರುವುದು ಆರ್.ಎಸ್.ಎಸ್ ಅನ್ನೋದು ಗೊತ್ತಿದೆ. ದೀಪಕ್ ರಾವ್ ಹತ್ಯೆ ಹಿಂದೆ ನಮ್ಮ ಕೈವಾಡ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಸಿ.ಟಿ.ರವಿ ಸೇರಿದಂತೆ ಸಂಸದೆ ಶೋಭಾ ಕರಂದ್ಲಾಜೆ, ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪರಿಗೂ ಬೆದರಿಕೆ ಒಡ್ಡಲಾಗಿದ್ದು, ಶೋಭಾ ಕರಂದ್ಲಾಜೆ ವಿರುದ್ಧ ಅವಾಚ್ಯ ಶಬ್ಧ ಬಳಕೆ ಮಾಡಲಾಗಿದೆ. ಇದಲ್ಲದೆ ವಿಎಚ್ಪಿಯ ಆರು ಮುಖಂಡರ ಹೆಸರನ್ನು ಕೂಡ ಉಲ್ಲೇಖಿಸಲಾಗಿದೆ.

ಬೆದರಿಕೆ ಪತ್ರ ಬಂದ ಹಿನ್ನಲೆ ಸಿ.ಟಿ.ರವಿ ಅವರು ಚಿಕ್ಕಮಗಳೂರು ಎಸ್ ಪಿ ಅಣ್ಣಾ ಮಲೈ ಅವರಿಗೆ ದೂರು ನೀಡಲಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.