ಬೀದರ್’ನಲ್ಲಿ ಉದ್ವಿಗ್ನ ಸ್ಥಿತಿ: ಬಂದ್ ವೇಳೆ ಲಾಠಿ ಚಾರ್ಜ್ – ಸಂಸದ ಸೇರಿ ಐವರಿಗೆ ಗಾಯ

BREAKING NEWS, Kannada News, Regional No Comments on ಬೀದರ್’ನಲ್ಲಿ ಉದ್ವಿಗ್ನ ಸ್ಥಿತಿ: ಬಂದ್ ವೇಳೆ ಲಾಠಿ ಚಾರ್ಜ್ – ಸಂಸದ ಸೇರಿ ಐವರಿಗೆ ಗಾಯ 33

ಬೀದರ್: ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಬೀದರ್’ನಲ್ಲಿ ​​ ಎಬಿವಿಪಿ, ಎಸ್ಎಫ್ಐ ಸೇರಿ ವಿವಿಧ ಹಿಂದೂಪರ ಸಂಘಟನೆಗಳು ಬಂದ್’ಗೆ ಕರೆ ನೀಡಿದ್ದು ಬೀದರ್’ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಬಂದ್​​ ವೇಳೆ ಪ್ರತಿಭಟನಾಕಾರರು ರಾಜ್ಯಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಷ ವ್ಯಕ್ತಿಪಡಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಧರಣಿ ನಿರತರ ನಡುವೆ ಮಾತಿನ ಚಕಮಕಿ ನಡೆದಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಈ ವೇಳೆ ಸಂಸದ ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಭಗವಂತ್ ಖೂಬ ಗಾಯಗೊಂಡ ಸಂಸದ.

ಬಂದ್ ಹಿನ್ನಲೆ ಬೀದಿ ವ್ಯಾಪಾರಿಗಳು, ಆಟೋ ಸಂಚಾರ ಬಂದ್ ಆಗಿದೆ. ​ ಬಲವಂತದಿಂದ ಬಂದ್​ ಮಾಡಲು ಪ್ರತಿಭಟನಾಕಾರರು ಮುಂದಾಗಿದ್ದಾರೆ. ಬೈಕ್ ರ್ಯಾಲಿ ಮೂಲಕ ಬೀದಿ ಬೀದಿ ಓಡಾಡಿ ಪ್ರತಿಭಟನೆ ನಡೆಸಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.