ಪರೇಶ್ ಮೇಸ್ತಾ ಹತ್ಯೆಯ ಪ್ರಮುಖ ಆರೋಪಿ ಬಂಧನ

BREAKING NEWS, Crime, Kannada News, Regional No Comments on ಪರೇಶ್ ಮೇಸ್ತಾ ಹತ್ಯೆಯ ಪ್ರಮುಖ ಆರೋಪಿ ಬಂಧನ 42

ಕಾರವಾರ: ಪರೇಶ್ ಮೇಸ್ತಾ ಹತ್ಯೆಯಲ್ಲಿ ಭಾಗಿಯಾಗಿದ್ದ ಎನ್ನಲಾದ ಪ್ರಮುಖ ಆರೋಪಿಯನ್ನ ಹೊನ್ನಾವರ ಪೊಲಿಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನ ಸಲೀಂ ಶೇಖ್ ಎಂದು ಗುರ್ತಿಸಲಾಗಿದೆ. ಕಳೆದ ಡಿಸೆಂಬರ್ 6ರಂದು ಕ್ಷುಲ್ಲಕ ಕಾರಣಕ್ಕೆ ಎರಡು ಕೋಮುಗಳ ನಡುವೆ ಘರ್ಷಣೆ ಏರ್ಪಟ್ಟಿತ್ತು. ಈ ವೇಳೆ ಇದೇ ಸ್ಥಳದಲ್ಲಿದ್ದ ಪರೇಶ್ ಮೇಸ್ತಾ ಕಾಣೆಯಾಗಿದ್ದ. ಡಿಸೆಂಬರ್ 8ರಂದು ಪರೇಶ್ ಮೇಸ್ತಾ ಶವ ಹೊನ್ನಾವರದ ಶಟ್ಟಿಕೆರೆಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ರಾಜ್ಯಾದ್ಯಂತ ಭಾರೀ ಹೋರಾಟಕ್ಕೆ ಕಾರಣವಾಗಿತ್ತು.

ಪರೇಶ್ ಮೇಸ್ತಾ ತಂದೆ ಕಮಲಾಕರ್ ಮೇಸ್ತಾ ತಮ್ಮ ಮಗನ ಕೊಲೆಯಾಗಿರುವ ಬಗ್ಗೆ ಹೊನ್ನಾವರ ಠಾಣೆಯಲ್ಲಿ ದೂರು ನೀಡಿದ್ದರು . ಪ್ರಕರಣವನ್ನು ಸಿಬಿಐಗೆ ವಹಿಸಿದ್ದರೂ ಈ ಕುರಿತು ತನಿಖೆ ನಡೆಸುತಿದ್ದ ಪೊಲೀಸರು ಗಲಭೆ ನಂತರ ಕಾಣೆಯಾಗಿದ್ದ ಆಪಾದಿತರನ್ನು ಬಂಧಿಸಲು ಹುಡುಕಾಟ ನಡೆಸಿದ್ದರು. ಖಚಿತ ಮಾಹಿತಿ ಮಾಹಿತಿ ಆಧರಿಸಿ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ತಲೆಮರಿಸಿಕೊಂಡಿದ್ದ ಸಲೀಂ ಶೇಕ್​ನನ್ನು ಹೊನ್ನಾವರ ಸಿಪಿಐ ಚೆಲುವರಾಜ್ ನೇತ್ರತ್ವದ ತಂಡ ಬಂಧಿಸಿದೆ.

Related Articles

Leave a comment

Back to Top

© 2015 - 2017. All Rights Reserved.