ಕ್ರಿಕೆಟ್ ಜೀವನಕ್ಕೆ ಗುಡ್‍ಬೈ ಹೇಳಿದ ಡಗ್ ಬೌಲಿಂಜರ್

Kannada News, Sports No Comments on ಕ್ರಿಕೆಟ್ ಜೀವನಕ್ಕೆ ಗುಡ್‍ಬೈ ಹೇಳಿದ ಡಗ್ ಬೌಲಿಂಜರ್ 12

ಸಿಡ್ನಿ: ಆಸ್ಟ್ರೇಲಿಯಾದ ವೇಗಿ ಡಗ್ ಬೌಲಿಂಜರ್ ಅವರು ತಮ್ಮ ಕ್ರಿಕೆಟ್ ಜೀವನಕ್ಕೆ ಗುಡ್‍ಬೈ ಹೇಳಿದ್ದಾರೆ. 2009ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ ಬೌಲಿಂಜರ್ 50 ವಿಕೆಟ್‍ಗಳನ್ನು ಪಡೆದಿದ್ದರೆ, 39 ಏಕದಿನ ಪಂದ್ಯಗಳಿಂದ 62 ವಿಕೆಟ್ ಹಾಗೂ 9 ಟ್ವೆಂಟಿ-20 ಪಂದ್ಯಗಳಿಂದ 9 ವಿಕೆಟ್ ಕೆಡವಿದ್ದಾರೆ.

ಐಪಿಎಲ್‍ನಲ್ಲೂ ಮಿಂಚು: ಆಸ್ಟ್ರೇಲಿಯಾ ತಂಡಕ್ಕಿಂತ ಹೆಚ್ಚಾಗಿ ಐಪಿಎಲ್‍ನಲ್ಲಿ ಗುರುತಿಸಿಕೊಂಡಿದ್ದ ಡಗ್ ಬೌಲಿಂಜರ್ 2010 ರಲ್ಲಿ ಮಹೇಂದ್ರಸಿಂಗ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ವೇಗದ ಅಸ್ತ್ರವಾಗಿ ಗುರುತಿಸಿಕೊಂಡಿದ್ದರು.

ಬೆಂಬಿಡದೆ ಕಾಡಿದ ಗಾಯದ ಸಮಸ್ಯೆಯಿಂದ 2011ರ ವಿಶ್ವಕಪ್‍ನಿಂದ ಹೊರಗುಳಿದಿದ್ದ ಬೌಲಿಂಜರ್ 2014ರ ಚುಟುಕು ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದರೂ ಒಂದು ಪಂದ್ಯದಲ್ಲೂ ಆಡದೆ ನಿರಾಸೆ ಅನುಭವಿಸಿದ್ದರು. ಈಗ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಗುಡ್‍ಬೈ ಹೇಳಿರುವ ಡಗ್ ಬೌಲಿಂಜರ್ ಸ್ಥಳೀಯ ತಂಡದಲ್ಲಿ ಪಾಲ್ಗೊಳ್ಳುವ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.