ಉತ್ತರಪ್ರದೇಶದಲ್ಲಿ ಮತ್ತೊಂದು ವೈದ್ಯಕೀಯ ಮಹಾ ಎಡವಟ್ಟು: ಎಚ್‌ಐವಿ ಪೀಡಿತ ವ್ಯಕ್ತಿಗೆ ಬಳಸಿದ್ದ ಸಿರಿಂಜ್ ಮರು ಬಳಕೆ;- 40 ಮಂದಿಗೆ ಸೋಂಕು

BREAKING NEWS, Crime, Kannada News, National No Comments on ಉತ್ತರಪ್ರದೇಶದಲ್ಲಿ ಮತ್ತೊಂದು ವೈದ್ಯಕೀಯ ಮಹಾ ಎಡವಟ್ಟು: ಎಚ್‌ಐವಿ ಪೀಡಿತ ವ್ಯಕ್ತಿಗೆ ಬಳಸಿದ್ದ ಸಿರಿಂಜ್ ಮರು ಬಳಕೆ;- 40 ಮಂದಿಗೆ ಸೋಂಕು 28

ಲಕ್ನೋ: ಯೋಗಿ ಆದಿತ್ಯನಾಥ್ ಆಡಳಿತವಿರುವ ಉತ್ತರಪ್ರದೇಶದಲ್ಲಿ ವೈದ್ಯಕೀಯ ರಂಗದಲ್ಲಿ ಮತ್ತೊಂದು ಮಹಾ ಎಡವಟ್ಟು ನಡೆದಿದೆ.

ನಕಲಿ ವೈದ್ಯನೋರ್ವ ಗ್ರಾಮಸ್ಥರಿಗೆ ಒಂದೇ ಸಿರಿಂಜ್ ನಲ್ಲಿ ಚಿಕಿತ್ಸೆ ನೀಡಿದ್ದರ ಪರಿಣಾಮ 40 ಮಂದಿ ಗ್ರಾಮಸ್ಥರು ಮಾರಣಾಂತಿಕ ಹೆಚ್ ಐವಿ ಸೋಂಕು ಪೀಡಿತರಾಗಿದ್ದಾರೆ.

ಉತ್ತರ ಪ್ರದೇಶದ ಉನ್ನಾವ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದಲ್ಲಿನ ನಕಲಿ ವೈದ್ಯನೋರ್ವ ತನ್ನ ಬಳಿ ಚಿಕಿತ್ಸೆಗೆ ಬಂದ ಗ್ರಾಮಸ್ಥರಿಗೆ ಒಂದೇ ಸಿರಿಂಜ್ ಬಳಕೆ ಮಾಡಿ ಚಿಕಿತ್ಸೆ ನೀಡಿದ್ದಾನೆ ಎನ್ನಲಾಗಿದೆ. ಪರಿಣಾಮ ಗ್ರಾಮದ 40 ಮಂದಿಯಲ್ಲಿ ಹೆಚ್ ಐವಿ ಸೋಂಕು ಪತ್ತೆಯಾಗಿದೆ. ಇನ್ನು ನಕಲಿ ವೈದ್ಯನ ವಿರುದ್ಧ ಆರೋಗ್ಯ ಇಲಾಖೆ ದೂರು ದಾಖಲು ಮಾಡಿದ್ದು, ಬಂಗಾರ್ ಮಾವ್ ಠಾಣೆಯಲ್ಲಿ ವೈದ್ಯನ ವಿರುದ್ಧ ದೂರು ದಾಖಲಾಗಿದೆ.

ಇತ್ತೀಚೆಗೆ ಸರ್ಕಾರೇತರ ಎನ್ ಜಿಒ ಸಂಸ್ಥೆಯೊಂದು ಗ್ರಾಮದಲ್ಲಿ ವೈದ್ಯಕೀಯ ಕ್ಯಾಂಪ್ ಆರಂಭಿಸಿದ್ದಾಗ ಈ ಆಘಾತಕಾರಿ ಸತ್ಯ ಹೊರಗೆ ಬಂದಿದೆ. ಮೆಡಿಕಲ್ ಕ್ಯಾಂಪ್ನಲ್ಲಿ ಭಾಗವಹಿಸಿದ್ದ 566 ಮಂದಿಯ ಪೈಕಿ 40 ಜನರಿಗೆ ಎಚ್‌ಐವಿ ಸೋಂಕು ತಗಲಿದೆ. ಘಟನೆಯ ಬಳಿಕ ಎಚ್ಚೆತ್ತುಕೊಂಡಿರುವ ಉತ್ತರ ಪ್ರದೇಶ ಸರಕಾರದ ಆರೋಗ್ಯ ಇಲಾಖೆ ತನಿಖೆಗಾಗಿ ತಂಡವನ್ನು ರಚಿಸಿದೆ.

Related Articles

Leave a comment

Back to Top

© 2015 - 2017. All Rights Reserved.