ದೇವತೆ ವಿಗ್ರಹಕ್ಕೆ ಚೂಡಿದಾರ್ ಉಡುಪಿನ ಅಲಂಕಾರ: ಇಬ್ಬರು ಅರ್ಚಕರು ಅಮಾನತ್ತು

BREAKING NEWS, Kannada News, National, Top News No Comments on ದೇವತೆ ವಿಗ್ರಹಕ್ಕೆ ಚೂಡಿದಾರ್ ಉಡುಪಿನ ಅಲಂಕಾರ: ಇಬ್ಬರು ಅರ್ಚಕರು ಅಮಾನತ್ತು 92

ಚೆನ್ನೈ: ತಮಿಳುನಾಡಿನ ಮೈಲಾದುತುರೈನ ಮಯೂರನಾಥಸ್ವಾಮಿ ದೇವಸ್ಥಾನದ ಅರ್ಚಕರೊಬ್ಬರು ಅಭಯಂಬಲ್ ದೇವತೆ ವಿಗ್ರಹಕ್ಕೆ ಚೂಡಿದಾರ ಉಡುಪಿನಿಂದ ಅಲಂಕಾರ ಮಾಡಿದ್ದು, ಭಾರೀ ವಿರೋಧಕ್ಕೆ ಕಾರಣವಾಗಿದೆ.

ಇನ್ನು ಚೂಡಿದಾರ ಉಡುಪಿನಿಂದ ಅಲಂಕಾರ ಮಾಡಿದ್ದಕ್ಕಾಗಿ ಇಬ್ಬರು ಅರ್ಚಕರನ್ನು ಸೇವೆಯಿಂದ ಕೈಬಿಡಲಾಗಿದೆ. 6 ತಿಂಗಳ ಹಿಂದಷ್ಟೇ ಸೇವೆಗೆ ನಿಯೋಜನೆಯಾಗಿದ್ದ ಅರ್ಚಕರ ಪುತ್ರಗೆ ದೇವಸ್ಥಾನದ ಆಚಾರ-ವಿಚಾರಗಳ ಬಗ್ಗೆ ಸರಿಯಾಗಿ ತಿಳಿದಿರಲಿಲ್ಲ. ಹೀಗಾಗಿ ಶುಕ್ರವಾದ ದೇವತೆ ವಿಗ್ರಹ ಶುಚಿಗೊಳಿಸಿದ ಅರ್ಚಕರ ಪುತ್ರ ರಾಜ್, ದೇವತೆಗೆ ಸೀರೆ ತೊಡಿಸುವ ಬದಲು ಉತ್ತರ ಭಾರತದ ಶೈಲಿಯಲ್ಲಿ ನೀಲಿ ದುಪ್ಪಟ್ಟಾ, ಪಿಂಕ್ ಕಮೀಜ್ ಮತ್ತು ನೀಲಿ ಸಲ್ವಾರ್ ತೊಡಿಸಿದ್ದ. ಈ ಅಚಾತುರ್ಯವನ್ನು ಮನಗಾಣದ ಪ್ರಧಾನ ಅರ್ಚಕ ಸಹ ದೇವಿಯ ವಿಗ್ರಹದ ಫೋಟೊ ಕ್ಲಿಕ್ಕಿಸಿ, ಫೇಸ್‌ಬುಕ್ಕಲ್ಲಿ ಹಾಕಿದ್ದರು. ಅದು ವಿವಾದಕ್ಕೆ ಕಾರಣವಾದ ಬಳಿಕ ಅಪ್ಪ, ಮಗ ಇಬ್ಬರನ್ನೂ ಸೇವೆಯಿಂದ ಕೈಬಿಡಲಾಗಿದೆ.

ಫೆ.2ರಂದು ಈ ಇಬ್ಬರು ಅರ್ಚಕರು ದೇಗುಲದ ಆವರಣದೊಳಗಿರುವ ಶಕ್ತಿ ದೇವತೆ ಮೂರ್ತಿಗೆ ಗುಜರಾತಿ ಶೈಲಿಯಲ್ಲಿ ಚೂಡಿದಾರ ತೊಡಿಸಿ ಅಲಂಕಾರ ಮಾಡಿದ್ದರು. ಜೊತೆಗೆ, ವಿಗ್ರಹಕ್ಕೆ ಗಂಧವನ್ನು ಪೂಸಿ ಸಿಂಗರಿಸಿದ್ದರು. ಅಲಂಕೃತ ವಿಗ್ರಹದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದನ್ನು ಗಮನಿಸಿದ ಕೆಲ ಭಕ್ತರು, ಇದು ‘ಆಗಮ’ ಸಂಪ್ರದಾಯದ ಉಲ್ಲಂಘನೆ ಎಂದು ಆರೋಪಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

Related Articles

Leave a comment

Back to Top

© 2015 - 2017. All Rights Reserved.