ರೈಲ್ವೆ ಇಲಾಖೆಯಲ್ಲಿ 26502 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Kannada News, National, Regional No Comments on ರೈಲ್ವೆ ಇಲಾಖೆಯಲ್ಲಿ 26502 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ 40

ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯಲ್ಲಿನ 26502 ಅಸಿಸ್ಟೆಂಟ್ ಲೋಕೋ ಪೈಲೆಟ್ (ಎಎಲ್‍ಪಿ) ಮತ್ತು ಇತರ ಟೆಕ್ನಿಷಿಯನ್ಸ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ: 26502

ಹುದ್ದೆಗಳ ವಿವರ

ಅಸಿಸ್ಟೆಂಟ್ ಲೋಕೋ ಪೈಲೆಟ್ – 17673

ಇತರ ಟೆಕ್ನಿಷಿಯನ್ಸ್ – 8829

ಇಲಾಖೆಯಲ್ಲಿನ 26502 ಹುದ್ದೆಗಳ ಪೈಕಿ ಬೆಂಗಳೂರು ವಿಭಾಗದಲ್ಲಿ 1054 ಹುದ್ದೆಗಳು ಲಭ್ಯವಿವೆ.

ವಿದ್ಯಾರ್ಹತೆ: ಮೆಟ್ರಿಕ್ಯೂಲೇಷನ್ ಅಥವಾ ಎಸ್.ಎಸ್.ಎಲ್.ಸಿ ಜೊತೆಗೆ ಐಟಿಐ ಮಾಡಿರಬೇಕು.

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 28 ವರ್ಷ ನಿಗದಿ ಮಾಡಲಾಗಿದ್ದು, ಪ.ಜಾ, ಪ.ಪಂ 5 ವರ್ಷ, ಹಿಂದುಳಿದ ವರ್ಗದವರಿಗೆ, ಮಾಜಿ ನೌಕರರಿಗೆ 3 ವರ್ಷ, ವಿಕಲಚೇತನರಿಗೆ (ಸಾಮಾನ್ಯ ವರ್ಗ) 10 ವರ್ಷ, ವಿಕಲಚೇತನರಿಗೆ (ಹಿಂದುಳಿದ ವರ್ಗ) 13 ವರ್ಷ, ವಿಕಲಚೇತನರಿಗೆ (ಪ.ಜಾ, ಪ.ಪಂ ವರ್ಗ) 15 ವರ್ಷದಷ್ಟು ಸಡಿಲತೆ ನೀಡಲಾಗಿದೆ.

ಶುಲ್ಕ: ಪ.ಜಾ, ಪ.ಪಂ, ಮಾಜಿ ನೌಕರರು, ಪಿಡಬ್ಲ್ಯೂಡಿ, ಮಹಿಳೆ, ಅಲ್ಪಸಂಖ್ಯಾತರು, ಆರ್ಥಿಕ ದುರ್ಬಲರಿಗೆ 250 ರೂ, ಇತರರಿಗೆ 500 ರೂ ಶುಲ್ಕ ನಿಗದಿ ಮಾಡಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-03-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.rrbbnc.gov.in ಗೆ ಭೇಟಿ ನೀಡಿ.

Related Articles

Leave a comment

Back to Top

© 2015 - 2017. All Rights Reserved.