ಇಂದು ಶ್ರವಣಬೆಳಗೊಳಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಭೇಟಿ

Kannada News, Regional, Top News No Comments on ಇಂದು ಶ್ರವಣಬೆಳಗೊಳಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಭೇಟಿ 10

ಹಾಸನ: ವಿಶ್ವವಿಖ್ಯಾತ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಶ್ರವಣಬೆಳಗೊಳವು ಸಜ್ಜಾಗಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಂದು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಲಿದ್ದಾರೆ.

ಈಗಾಗಲೇ ಬಾಹುಬಲಿ ಕ್ಷೇತ್ರದಲ್ಲಿ ಹಲವಾರು ತಿಂಗಳುಗಳಿಂದ ಕಲಶ ನಗರಗಳು, ಅಟ್ಟಣಿಗೆ ಕಾರ್ಯ, ರಸ್ತೆ ಕಾಮಗಾರಿ, ಶ್ರವಣಬೆಳಗೊಳದ ಬಸ್ ನಿಲ್ದಾಣ ನವೀಕರಣ, ಮುಂತಾದ ಕೆಲಸಗಳು ಅಚ್ಚುಕಟ್ಟಾಗಿ ಮುಗಿದಿದ್ದು, ಕಾರ್ಯಕ್ರಮಕ್ಕೆ ಭಗವದ್ಭಕ್ತರ, ಗಣ್ಯವ್ಯಕ್ತಿಗಳ, ಪ್ರವಾಸಿಗಳ ಆಗಮನಕ್ಕಾಗಿ ಎದುರುನೋಡುತ್ತಿದೆ. ಫೆ. 7 ಅಂದರೆ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಶ್ರವಣಬೆಳಗೊಳಕ್ಕೆ ರಾಷ್ಟ್ರಪತಿಗಳು ಆಗಮಿಸಲಿದ್ದು, 10:45 ರಿಂದ 11:45 ರವರೆಗೆ ನಡೆಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.