ದ್ವೀಪ ರಾಷ್ಟ್ರ ಮಾಲ್ಡೀವ್ಸ್​ನಲ್ಲಿ ತುರ್ತು ಪರಿಸ್ಥಿತಿ: ಭಾರತಕ್ಕೆ ಆತಂಕ

International, Kannada News No Comments on ದ್ವೀಪ ರಾಷ್ಟ್ರ ಮಾಲ್ಡೀವ್ಸ್​ನಲ್ಲಿ ತುರ್ತು ಪರಿಸ್ಥಿತಿ: ಭಾರತಕ್ಕೆ ಆತಂಕ 50

ನವದೆಹಲಿ: ದ್ವೀಪ ರಾಷ್ಟ್ರ ಮಾಲ್ಡೀವ್ಸ್​ನಲ್ಲಿ ಅಧ್ಯಕ್ಷರು ತುರ್ತು ಪರಿಸ್ಥಿತಿ ಹೇರಿದ ಹಿನ್ನಲ್ಲೇ ಭಾರತವು ಈಗ ಆತಂಕ ವ್ಯಕ್ತಪಡಿಸಿದ್ದು, ಮಾಲ್ಡೀವ್ಸ್​ನಲ್ಲಿ ಆಗುತ್ತಿರುವ ಬೆಳವಣಿಗೆಗಳು ಆತಂಕ ಹುಟ್ಟಿಸುತ್ತಿವೆ ಎಂದು ಭಾರತದ ವಿದೇಶಾಂಗ ಇಲಾಖೆಯ ಕಳವಳ ವ್ಯಕ್ತಪಡಿಸಿದೆ.

“ಮಾಲ್ಡೀವ್ಸ್​​ನಲ್ಲಿ ತುರ್ತು ಸ್ಥಿತಿ ಘೋಷಣೆಯಿಂದ ವಿಚಲಿತಗೊಂಡಿದ್ದೇವೆ,” ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದೇ ವೇಳೆ, ಮಾಲ್ಡೀವ್ಸ್​ನ ಮಾಜಿ ಅಧ್ಯಕ್ಷ ಮೊಹಮ್ಮದ್ ನಷೀದ್ ಅವರು ತಮ್ಮ ರಾಷ್ಟ್ರದ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂದು ಭಾರತಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಏನಿದು ಘಟನೆ..?

ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರು ನ್ಯಾಯಾಂಗ ವ್ಯವಸ್ಥೆಯನ್ನೇ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅಷ್ಟೇ ಅಲ್ಲ, ತನ್ನ ರಾಜಕೀಯ ವಿರೋಧಿಗಳೆಲ್ಲರನ್ನೂ ನಿವಾರಿಸುವ ಪ್ರಯತ್ನ ಮಾಡಿದ್ದಾರೆ. ಪ್ರಮುಖ ವಿಪಕ್ಷ ಮುಖಂಡರನ್ನು ಜೈಲಿಗೆ ಅಟ್ಟಿದ್ದಾರೆ. ವಿರೋಧ ಪಕ್ಷದ ಮುಖಂಡರನ್ನು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಮಾಡಿದ ಆದೇಶವನ್ನು ಅಧ್ಯಕ್ಷರು ಪಾಲಿಸಲಿಲ್ಲ. ಬದಲಾಗಿ, ಮುಖ್ಯನ್ಯಾಯಮೂರ್ತಿಗಳನ್ನೇ ಬಂಧಿಸಿಟ್ಟಿದ್ದಾರೆ. ಆ ನಂತರ, 15 ದಿನಗಳ ಕಾಲ ದೇಶದಲ್ಲಿ ತುರ್ತು ಸ್ಥಿತಿ ಘೋಷನೆ ಮಾಡಿದ್ದು, ಜನಸಾಮಾನ್ಯರ ಅಧಿಕಾರವನ್ನೂ ಕಿತ್ತುಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಮಾಜಿ ಅಧ್ಯಕ್ಷ ನಷೀದ್ ಅವರು ಭಾರತ, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳ ಸಹಾಯ ಯಾಚಿಸಿದ್ದಾರೆ. ಹಾಲಿ ಅಧ್ಯಕ್ಷ ಯಾಮೀನ್ ಅವರ ಎಲ್ಲಾ ಬ್ಯಾಂಕ್ ವಹಿವಾಟನ್ನು ಮುಟ್ಟುಗೋಲು ಹಾಕುವಂತೆ ಅಮೆರಿಕಕ್ಕೆ ಮನವಿ ಮಾಡಿದ್ದಾರೆ. ರಾಯಭಾರಿ ಮತ್ತು ಸೇನೆಯನ್ನು ಮಾಲ್ಡೀವ್ಸ್​ಗೆ ಕರೆತರಬೇಕೆಂದು ಭಾರತಕ್ಕೂ ಮನವಿ ಮಾಡಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.