ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಮಾರಾಟಕ್ಕೆ ಯತ್ನ: ಆರೋಪಿಗಳ ಬಂಧನ

Crime, Kannada News, Regional No Comments on ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಮಾರಾಟಕ್ಕೆ ಯತ್ನ: ಆರೋಪಿಗಳ ಬಂಧನ 14

ಮೈಸೂರು: ಅಕ್ರಮವಾಗಿ ಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆಟೋ ಚಾಲಕ ಏಜಾಜ್ ಪಾಷ  ಸೈಯದ್ ಪ್ಯಾರು ಬಂಧಿತ ಆರೋಪಿಗಳು. ಬಂಧಿತರು 13 ಕ್ವಿಂಟಲ್  ಪಡಿತರ ಅಕ್ಕಿ  ಮಾರಾಟ ಯತ್ನಿಸಿದ್ದರು. ನಗರದ ಅಶೋಕ ರಸ್ತೆ 15ನೇ ಕ್ರಾಸ್‍ನಲ್ಲಿ ಮನೆಮುಂದೆ ಗೂಡ್ಸ್ ಆಟೋದಲ್ಲಿ ಅಕ್ಕಿ ತುಂಬಿದ್ದರು.

ಈ ವೇಳೆ  ಸಿಸಿಬಿ ಇನ್‍ ಸ್ಪೆಕ್ಟರ್ ಕೃಷ್ಣಪ್ಪ, ಆಹಾರ ನಿರೀಕ್ಷಕಿ ಲಕ್ಷ್ಮೀ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಆಹಾರ ನಿರೀಕ್ಷಕಿ ಗೂಡ್ಸ್ ಆಟೋ ಪರಿಶೀಲನೆ ಮಾಡಿದ ವೇಳೆ  ಘಟನೆ ಬೆಳಕಿಗೆ ಬಂದಿದೆ. ಈ ವೇಳೆ ಆಟೋ ಒಳಗಿದ್ದ ಪಡಿತರ ಅಕ್ಕಿ ದಾಖಲೆ ತೋರಿಸುವಂತೆ ಹೇಳಿದಾಗ ಆರೋಪಿಗಳು ಸಿಕ್ಕಿಬಿದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಂಡಿಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.