ಏಕದಿನ ಕ್ರಿಕೆಟ್’ನಲ್ಲಿ ಜೂಲನ್ ಗೋಸ್ವಾಮಿ ವಿಶ್ವದಾಖಲೆ

BREAKING NEWS, Kannada News, Sports No Comments on ಏಕದಿನ ಕ್ರಿಕೆಟ್’ನಲ್ಲಿ ಜೂಲನ್ ಗೋಸ್ವಾಮಿ ವಿಶ್ವದಾಖಲೆ 14

ಕಿಂಬರ್ಲಿ: ಭಾರತದ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಜೂಲನ್ ಗೋಸ್ವಾಮಿ ಅವರು ಏಕದಿನ ಕ್ರಿಕೆಟ್ ನಲ್ಲಿ 200 ವಿಕೆಟ್ ಪಡೆಯುವ ಮೂಲಕ ಗರಿಷ್ಠ ವಿಕೆಟ್ ಪಡೆದ ವಿಶ್ವದ ಮೊದಲ ಮಹಿಳಾ ಬೌಲರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ನಿನ್ನೆ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಜೂಲನ್ ಗೋಸ್ವಾಮಿ ಅವರು ಆಫ್ರಿಕದ ಲೌರಾ ವೋಲ್ವಡ್ತ್ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದರು.

ಬಂಗಾಳದ 35 ವರ್ಷದ ವೇಗಿ ಜೂಲನ್ ಗೋಸ್ವಾಮಿ ಅವರು ಮೇ 2017ರಲ್ಲಿ ಗರಿಷ್ಠ ವಿಕೆಟ್ ಸಾಧನೆ ಮಾಡಿದ್ದ ಆಸ್ಟ್ರೇಲಿಯದ ವೇಗಿ ಕ್ಯಾಥರಿನ್ ಫಿಟ್ಜ್ ಪ್ಯಾಟ್ರಿಕ್ ಅವರ ದಾಖಲೆ ಮುರಿದಿದ್ದರು. ಒಟ್ಟು 180 ವಿಕೆಟ್ ಗಳನ್ನು ಕಬಳಿಸಿ ಕ್ಯಾಥರಿನ್ ಅಗ್ರಸ್ಥಾನದಲ್ಲಿದ್ದರು. ಕಳೆದ ವರ್ಷ ಜೂಲನ್ ಗೋಸ್ವಾಮಿ ಅವರು 181 ವಿಕೆಟ್ ಗಳನ್ನು ಪಡೆಯುವ ಮೂಲಕ ಕ್ಯಾಥರಿನ್ ದಾಖಲೆಯನ್ನು ಹಿಂದಿಕ್ಕಿದ್ದರು. ಇದೀಗ 200 ವಿಕೆಟ್ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.