ಕೊಹ್ಲಿ ಅಬ್ಬರದ ಶತಕ: ಆಫ್ರಿಕಾಗೆ ಹೀನಾಯ ಸೋಲು

Kannada News, Sports No Comments on ಕೊಹ್ಲಿ ಅಬ್ಬರದ ಶತಕ: ಆಫ್ರಿಕಾಗೆ ಹೀನಾಯ ಸೋಲು 18

ಕೇಪ್’ಟೌನ್: ಇಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲೂ ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾ ತಂಡವನ್ನ 124 ರನ್’ಗಳ ಅಂತರದಿಂದ ಬಗ್ಗುಪಡೆದಿದೆ. ಈ ಮೂಲಕ ಹರಿಣಗಳ ನಾಡಲ್ಲಿ ಹ್ಯಾಟ್ರಿಕ್ ಜಯದ ಸಾಧನೆ ಮಾಡಿದೆ. ಅಲ್ಲದೆ 6 ಪಂದ್ಯಗಳ ಏಕದಿನ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ, ವಿರಾಟ್ ಕೊಹ್ಲಿ ಅವರ ಅಬ್ಬರದ ಶತಕ(160)ದ ನೆರವಿನಿಂದ 303 ರನ್’ಗಳ ಬೃಹತ್ ಮೊತ್ತ ಪೇರಿಸಿತು.

304 ರನ್ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಆರಂಭದಿಂದಲೇ ರನ್ ಗಳಿಸಲು ಪರದಾಡಿತು. ಮಧ್ಯಮ ಕ್ರಮಾಂಕದ ಆಟಗಾರ ಜೆ.ಪಿ. ಡುಮಿನಿ(51) ಅರ್ಧಶತಕ ಗಳಿಸಿದ್ದು ಬಿಟ್ಟರೆ ಬೇರಾವುದೇ ಆಟಗಾರರಿಂದ ಕೆಚ್ಚೆದೆಯ ಬ್ಯಾಟಿಂಗ್ ಬರಲಿಲ್ಲ. ಅದರಲ್ಲೂ ಭಾರತದ ಮಣಿಕಟ್ಟಿನ ಸ್ಪಿನ್ ಮೋಡಿಗೆ ದಕ್ಷಿಣ ಆಫ್ರಿಕಾ ಬಳಿ ಉತ್ತರವೇ ಇರಲಿಲ್ಲ. ತಲಾ 4 ವಿಕೆಟ್ ಉರುಳಿಸಿದ ಯಜುವೇಂದ್ರ ಚಾಹಲ್ ಮತ್ತು ಕುಲ್ದೀಪ್ ಯಾದವ್ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಪಡೆಯನ್ನ ಧೂಳಿಪಟ ಮಾಡಿದರು.

ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡ 40 ಓವರ್’ಗಳಲ್ಲಿ 179 ರನ್’ಗಳಿಗೆ ಆಲೌಟ್ ಆಗುವುದರೊಂದಿಗೆ 124 ರನ್’ಗಳ ಹೀನಾಯ ಸೋಲು ಖಂಡಿತು.

Related Articles

Leave a comment

Back to Top

© 2015 - 2017. All Rights Reserved.