ಚಾಮರಾಜನಗರದಲ್ಲಿ “ಪ್ರಥಮ ಅಖಿಲ ಭಾರತ ಕನ್ನಡ ಸಮ್ಮೇಳನ” ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ

Kannada News, Regional No Comments on ಚಾಮರಾಜನಗರದಲ್ಲಿ “ಪ್ರಥಮ ಅಖಿಲ ಭಾರತ ಕನ್ನಡ ಸಮ್ಮೇಳನ” ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ 14

ಚಾಮರಾಜನಗರ: ರಾಜ್ಯದ ಗಡಿ ಜಿಲ್ಲೆಯಾದ ಚಾಮರಾಜನಗರದಲ್ಲಿ “ಪ್ರಥಮ ಅಖಿಲ ಭಾರತ ಕನ್ನಡ ಸಮ್ಮೇಳನ “ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರಕಿತು.

ಅಖಿಲ ಕರ್ನಾಟಕ ಕನ್ನಡ ಮಹಾಸಭಾ ವತಿಯಿಂದ ಜಿಲ್ಲಾಡಳಿತ ಭವನದ ಜೆ.ಎಚ್ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ” ಪ್ರಥಮ ಅಖಿಲ ಭಾರತ ಕನ್ನಡ ಸಮ್ಮೇಳನ “ಕಾರ್ಯಕ್ರಮದ ಉದ್ಘಾಟನೆಯನ್ನು ಕಾವೇರಿ ಹೋರಾಟಗಾರರು ಜಿ. ಮಾದೇಗೌಡರು ನೆರವೇರಿಸಿದರು.

ಸಮ್ಮೇಳನ ಅಧ್ಯಕ್ಷರಾಗಿ ಕಳೆದ ಆರು ದಶಕಗಳಿಂದ ಕನ್ನಡಕ್ಕಾಗಿ ಹೋರಾಟ ನಡೆಸುತ್ತಿರುವ ಕನ್ನಡ ಚಳುವಳಿ ಅಗ್ರಮಾನ್ಯ ನಾಯಕ ಶ್ರೀ ವಾಟಾಳ್ ನಾಗರಾಜ್ ಅವರನ್ನು ಮಾಡಿತ್ತು. ಸಮ್ಮೇಳನಾಧ್ಯಕ್ಷರ ಮೆರವಣಿಗೆ ಗೆ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಶ್ರೀ ಸಾ. ರಾ. ಗೋವಿಂದು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾದ ಪ್ರೊ. ಎಸ್. ಜಿ ಸಿದ್ದರಾಮಯ್ಯ, ಹೆಸರಾಂತ ಸಾಹಿತಿ ಸಿ.ಪಿ. ಕೃಷ್ಣಕುಮಾರ್, ಡಾ. ಟಿ. ಸಿ ಪೂರ್ಣಿಮಾ, ಸಾಹಿತಿ ಬನ್ನೂರುಕೆ ರಾಜು ಹಾಗೂ ಇನ್ನೂ ಮುಂತಾದ ಕನ್ನಡ ಹೋರಾಟಗಾರರು ಭಾಗವಹಿಸಿದ್ದರು. ರಾಜ್ಯಾಧ್ಯಕ ಚಾ. ರಂ ಶ್ರೀನಿವಾಸ್ ಗೌಡ, ತೇಜೇಶ್ ಲೋಕೇಶ್ ಗೌಡ ಗೌಡ ಚಿತ್ರದಲ್ಲಿ ಇದ್ದಾರೆ.

Related Articles

Leave a comment

Back to Top

© 2015 - 2017. All Rights Reserved.