ಪಕೋಡ ಮಾಡೋರಿಗೂ ಸರ್ಕಾರಿ ಕೆಲಸ ಸೃಷ್ಟಿ ಮಾಡಿ, ESI, PF ಕೊಡಿ: ಪ್ರಧಾನಿ ಮೋದಿ ವಿರುದ್ಧ ಪಕೋಡ ಮಾರಿ ಪ್ರತಿಭಟನೆ

BREAKING NEWS, Kannada News, Regional, Top News No Comments on ಪಕೋಡ ಮಾಡೋರಿಗೂ ಸರ್ಕಾರಿ ಕೆಲಸ ಸೃಷ್ಟಿ ಮಾಡಿ, ESI, PF ಕೊಡಿ: ಪ್ರಧಾನಿ ಮೋದಿ ವಿರುದ್ಧ ಪಕೋಡ ಮಾರಿ ಪ್ರತಿಭಟನೆ 35

ನಂಜನಗೂಡು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಇಂದು ನಂಜನಗೂಡಿನಲ್ಲಿ ಪಕೋಡ ಮಾರಿ ಪ್ರತಿಭಟನೆ ನಡೆಸಲಾಗಿದೆ.

ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂಭಾಗದಲ್ಲಿ ಜನ ಸಂಗ್ರಾಮ್ ಪರಿಷತ್ ತಾ.ಘಟಕ, ಡಿ.ಎಸ್.ಎಸ್’ನ ಸಂಘಟನೆಗಳು ಹಾಗೂ ಉದ್ಯೋಗಕ್ಕಾಗಿ ಯುವ ಜನರ ಜಿಲ್ಲಾ ಘಟಕ ದವರು ಸ್ವಉದ್ಯೋಗಮಾಡಿ ಒಂದು ಪ್ಲೇಟ್ ಪಕೋಡಕ್ಕೆ 10 ರೂ. ನಿಗದಿ ಪಡಿಸಿ, ಮಾರಾಟಮಾಡಿ ಪ್ರತಿಭಟನೆ ನಡೆಸಿವೆ.

ಈ ವೇಳೆ ಪ್ರತಿಭಟನಾಕಾರರು ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ಸಂದರ್ಭದಲ್ಲಿ 1 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ. ಕೆಲಸ ಕೋಡುತ್ತೆವೆ ಖಾಲಿ ಬಿಡಲ್ಲ ಅಂತ ಹೇಳಿದ್ದರು. ಆದರೆ ಉದ್ಯೋಗ ಕೋಡಿ ಎಂದು ಯುವ ಜನರು ಕೇಳಿದ ಸಂದರ್ಭದಲ್ಲಿ ತಮ್ಮ ಮಾತನ್ನು ಬದಲಾವಣೆ ಮಾಡಿ ಪಕೋಡ ಮಾಡೋದು ಕೂಡ ಉದ್ಯೋಗನೇ ನನ್ನನ್ನು ಉದ್ಯೋಗ ಕೇಳೋದ್ ಬಿಟ್ಟು, ಪಕೋಡ ಮಾಡಿ ಕೂಡ ಜೀವನ ಮಾಡಬಹುದು ಎಂದು ಹೇಳಿದ್ದರು. ಪ್ರಧಾನಿಯವರು ತಾವು ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ ಎಂದು ಕಿಡಿ ಕಾರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಂದೆಗಾಲದ ಶ್ರೀನಿವಾಸ್ ಪಕೋಡ ಮಾಡೋರಿಗು ಸರ್ಕಾರಿ ಜಾಬ್ ಸೃಷ್ಟಿ ಮಾಡಿ, ಅವರಿಗೆ ESI, PF ಕೊಡಬೇಕೆಂಬ ಉದ್ದೇಶವಿಟ್ಟುಕೊಂಡು ಪಕೋಡ ಮಾಡುತ್ತಿದ್ದೇವೆ. ಮೊದಿಯವರ ಆಜ್ಞೆ ಉಲ್ಲಂಘನೆ ಮಾಡಲ್ಲ ಎಂದು ಹೇಳಿದರು. ಈ ವೇಳೆ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಕೋಡ ಮಾಡಿ, ಕೆಲವರು ಕೊಂಡುಕೊಂಡು ಬೆಂಬಲನೀಡಿದ್ದರು.

ಈ ವೇಳೆ ಜ.ಸ.ಪರಿಷತ್ ನ ಸೋಮಣ್ಣ,ವಿಜಯ್ ಕುಮಾರ್, ಹಾಗೂ ಉದ್ಯೋಗ ಕ್ಕಾಗಿ ಯುವ ಜನರ ಜಿಲ್ಲಾ ಘಟಕದ ಸಂಚಲಾಕ ಸೋಮಶೇಖರ್ ರವರು ಉಪಸ್ಥತರಿದ್ದರು.

ವರದಿ: ಕುಮಾರ್ ಹೆಚ್.ಪಿ
ಪತ್ರಿಕೋದ್ಯಮ ವಿದ್ಯಾರ್ಥಿ
ಮಾ.ಗಂಗೋತ್ರಿ ಮೈಸೂರು

Related Articles

Leave a comment

Back to Top

© 2015 - 2017. All Rights Reserved.