ಖೇಲೋ ಇಂಡಿಯಾ ಕ್ರೀಡಾಕೂಟ ಮುಕ್ತಾಯ: 44ಪದಕಗಳೊಂದಿಗೆ ಅಭಿಯಾನ ಮುಗಿಸಿದ ಕರ್ನಾಟಕ

Kannada News, Sports No Comments on ಖೇಲೋ ಇಂಡಿಯಾ ಕ್ರೀಡಾಕೂಟ ಮುಕ್ತಾಯ: 44ಪದಕಗಳೊಂದಿಗೆ ಅಭಿಯಾನ ಮುಗಿಸಿದ ಕರ್ನಾಟಕ 19

ನವದೆಹಲಿ: ಖೇಲೋ ಇಂಡಿಯಾ ಅಂಡರ್-17 ಶಾಲಾ ಕ್ರೀಡಾಕೂಟ ಮುಕ್ತಾಯಗೊಂಡಿದ್ದು, ಕರ್ನಾಟಕ 16 ಚಿನ್ನ, 11 ಬೆಳ್ಳಿ ಹಾಗೂ 17 ಕಂಚಿನೊಂದಿಗೆ ಒಟ್ಟು 44ಪದಕಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಕ್ರೀಡಾಕೂಟದಲ್ಲಿ ಪದಕ ಪಟ್ಟಿಯಲ್ಲಿ 4ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದೆ.

ಇನ್ನು 38 ಚಿನ್ನದೊಂದಿಗೆ ಒಟ್ಟು 102 ಪದಕ ಗೆದ್ದ ಹರ್ಯಾಣ ಕ್ರೀಡಾಕೂಟದ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಮಹಾರಾಷ್ಟ್ರ ಹಾಗೂ ದೆಹಲಿ ತಂಡಗಳು ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದುಕೊಂಡವು.

ಕ್ರೀಡಾಕೂಟದ ಕೊನೆಯ ದಿನವಾದ ಗುರುವಾರ ಬ್ಯಾಡ್ಮಿಂಟನ್‌ನಲ್ಲಿ ಕರ್ನಾಟಕಕ್ಕೆ ಒಂದು ಚಿನ್ನ ಸೇರಿ 3 ಪದಕ ದೊರೆಯಿತು.

ಪದಕ ಪಟ್ಟಿ

ರಾಜ್ಯ              ಚಿನ್ನ       ಬೆಳ್ಳಿ      ಕಂಚು     ಒಟ್ಟು

ಹರ್ಯಾಣ        38             26             38      –      102

ಮಹಾರಾಷ್ಟ್ರ   36              32             43      –     111

ದೆಹಲಿ               25              29             40     –      90

ಕರ್ನಾಟಕ        16               11               17      –     44

ಮಣಿಪುರ          13               13             08      –     34

Related Articles

Leave a comment

Back to Top

© 2015 - 2017. All Rights Reserved.