ನೆಚ್ಚಿನ ನಟನನ್ನು ನೋಡುವ ಬಯಕೆ: ಕ್ಯಾನ್ಸರ್ ಪೀಡಿತ ಕಟ್ಟಾ ಅಭಿಮಾನಿಗೆ ವಿಡಿಯೋ ಕಾಲ್ ಮಾಡಿದ ದರ್ಶನ್

BREAKING NEWS, Kannada News, Sports No Comments on ನೆಚ್ಚಿನ ನಟನನ್ನು ನೋಡುವ ಬಯಕೆ: ಕ್ಯಾನ್ಸರ್ ಪೀಡಿತ ಕಟ್ಟಾ ಅಭಿಮಾನಿಗೆ ವಿಡಿಯೋ ಕಾಲ್ ಮಾಡಿದ ದರ್ಶನ್ 36

ಸಿನೆಮಾ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ. ದರ್ಶನ್ ಅವರಿಗೂ ಅಭಿಮಾನಿಗಳೆಂದರೆ ಅಚ್ಚುಮೆಚ್ಚು. ಕ್ಯಾನ್ಸರ್ ಗೆ ತುತ್ತಾದ ಅಭಿಮಾನಿಗೆ ವಿಡಿಯೋ ಕಾಲ್ ಮಾಡಿ ದರ್ಶನ್ ಮಾತನಾಡಿದ್ದಾರೆ.

ಕ್ಯಾನ್ಸರ್ ರೋಗದಿಂದ ತನ್ನ ಕೊನೆಯ ದಿನಗಳನ್ನು ಕಳೆಯುತ್ತಿರುವ ಶಿವಮೊಗ್ಗದ ನಿವಾಸಿ ರೇವಂತ್ ದರ್ಶನ್ ಅವರ ಕಟ್ಟಾ ಅಭಿಮಾನಿ. ತಮ್ಮ ಅಭಿಮಾನಿಯ ಸ್ಥಿತಿ ದರ್ಶನ್’ರ ಗಮನಕ್ಕೆ ಬಂದಾಗ ರೇವಂತ್ ಹಾಗೂ ಅವರ ಫ್ಯಾಮಿಲಿ ಗೆ ತಮ್ಮ ಬ್ಯುಸಿ ಷೆಡ್ಯೂಲ್ ಅಲ್ಲಿ ವಿಡಿಯೋ ಕಾಲ್ ಮಾಡಿ ಯೋಗಕ್ಷೇಮ ವಿಚಾರಿಸಿಕೊಂಡು ಸಾಂತ್ವನ ಹೇಳಿದ್ದಾರೆ.

ಶಿವಮೊಗ್ಗದ ರೇವಂತ್ ಅವರಿಗೆ ದರ್ಶನ್ ಅಂದ್ರೆ ಅಚ್ಚುಮೆಚ್ಚು. ನೆಚ್ಚಿನ ನಟನ ಎಲ್ಲಾ ಸಿನಿಮಾ ನೋಡಿರುವ ಅವರು, ಪ್ರತಿ ಹುಟ್ಟುಹಬ್ಬದ ದಿನ ಬೆಂಗಳೂರಿಗೆ ಹೋಗಿ ಶುಭ ಕೋರಿ ಬರುತ್ತಾರೆ. ದರ್ಶನ್ ಅವರನ್ನು ಭೇಟಿಯಾಗಬೇಕು, ಮಾತನಾಡಬೇಕೆಂಬ ಬಯಕೆ ಅವರಿಗೆ ಜಾಸ್ತಿಯಾಗಿದೆ.

ರೇವಂತ್ ಅವರು ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಒಮ್ಮೆ ತಮ್ಮ ನೆಚ್ಚಿನ ನಟನನ್ನು ನೋಡುವ ಬಯಕೆಯಾಗಿದೆ. ರೇವಂತ್ ತಮಗಾಗಿ ಕಾತರಿಸುತ್ತಿರುವ ಮಾಹಿತಿ ತಿಳಿದ ದರ್ಶನ್ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.