ಪರೇಶ್ ಮೇಸ್ತಾ ಸಾವು ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ

BREAKING NEWS, Crime, Kannada News, Regional No Comments on ಪರೇಶ್ ಮೇಸ್ತಾ ಸಾವು ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ 15

ಕಾರವಾರ: ಪರೇಶ್ ಮೇಸ್ತಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಐವರು ಆರೋಪಿಗಳನ್ನ ಬಂಧಿಸುವಲ್ಲಿ ಹೊನ್ನಾವರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ವಾರ ಮೊದಲ ಆರೋಪಿ ಆಸೀಪ್ ರಫಿಕ್ ಎಂಬವನನ್ನು ಭಟ್ಕಳದ ಶಿರಾಲಿಯಲ್ಲಿ ಬಂಧಿಸಲಾಗಿತ್ತು. ಹೊನ್ನಾವರದಲ್ಲಿ ಡಿಸಂಬರ್ ನಲ್ಲಿ ಪ್ರಮುಖ ಆರೋಪಿ ಆಜಾದ್ ಅಣ್ಣಿಗೇರಿಯನ್ನು ಹಾಗೂ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಸಲೀಂ ಶೇಖ್‍ನನ್ನು ಎರಡು ದಿನಗಳ ಹಿಂದೆ ಬಂಧಿಸಲಾಗಿತ್ತು.

ನಂತರ ಬಂಧಿತರು ನೀಡಿದ ಖಚಿತ ಮಾಹಿತಿ ಆಧರಿಸಿ ಗುರುವಾರ ಶಿರಸಿಯಲ್ಲಿ ಇಮ್ತಿಯಾಜ್ ಶೇಖ್ ಹಾಗೂ ಸಯ್ಯದ್ ಫೈಜಲ್ ನನ್ನು ಬಂಧಿಸಲಾಗಿದೆ. ಈ ಮೂಲಕ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಎಲ್ಲಾ ಐದು ಆರೋಪಿಗಳ ಬಂಧನವಾಗಿದೆ.

Related Articles

Leave a comment

Back to Top

© 2015 - 2017. All Rights Reserved.