ನಾಳೆ ಹೆಚ್.ಡಿ.ದೇವೇಗೌಡರ ಸಾಧನೆಗಳ ಕುರಿತ ‘ಸಾಧನೆಯ ಶಿಖರಾರೋಹಣ’ ಪುಸ್ತಕ ಬಿಡುಗಡೆ

Kannada News, Regional No Comments on ನಾಳೆ ಹೆಚ್.ಡಿ.ದೇವೇಗೌಡರ ಸಾಧನೆಗಳ ಕುರಿತ ‘ಸಾಧನೆಯ ಶಿಖರಾರೋಹಣ’ ಪುಸ್ತಕ ಬಿಡುಗಡೆ 29

ಮೈಸೂರು: ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡರ ಸಾಧನೆ ಕುರಿತ ‘ಸಾಧನ ಶೀಖರಾರೋಹಿಣ’ ಪುಸ್ತಕದ ಪರಿಷ್ಕೃತ ಪರಿವರ್ಧಿತ ಆವೃತ್ತಿ ನಾಳೆ ಬಿಡುಗಡೆಯಾಗಲಿದೆ ಎಂದು ಡಾ.ಪ್ರಧಾನ್ ಗುರುದತ್ತ ತಿಳಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಫೆಬ್ರವರಿ 10 ರಂದು ಮೈಸೂರು ವಿಶ್ವ ವಿದ್ಯಾನಿಲಯದ ಸೆನೆಟ್ ಭವನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾಧನೆಯ ಶಿಖರಾರೋಹಣ ಪುಸ್ತಕವನ್ನು ಲೋಕಾರ್ಪಣೆಗೊಳಿಸುವರು. ಈ ಪುಸ್ತಕದಲ್ಲಿ ಹೆಚ್.ಡಿ.ದೇವೇಗೌಡರು 10 ತಿಂಗಳು ಪ್ರಧಾನ ಮಂತ್ರಿಗಳಾಗಿದ್ದಾಗ ಅವರು ಮಾಡಿರುವ ಅಭಿವೃದ್ದಿಗಳು, ಅವರು ಮಾಡಿದ ಚರ್ಚೆಗಳು, ಚಿಂತನೆಗಳು, ಸಾಧನೆಗಳ ಈ ಪುಸ್ತಕದಲ್ಲಿ ಅಡಗಿದೆ. ಈ ಪುಸ್ತಕ ಇಂಗ್ಲೀಷ್ ಮತ್ತು ಹಿಂದಿಯಲ್ಲಿಯೂ ಕೂಡ ರಚಿಸಲಾಗುತ್ತಿದ್ದು, ಮುಂದಿನ ಮೂರು ತಿಂಗಳಲ್ಲಿ ಡೆಲ್ಲಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಈ ವೇಳೆ ಜೆಡಿಎಸ್ ನ ಪ್ರೊ.ಕೆ.ಎಸ್.ರಂಗಪ್ಪ, ಉಪ ಮೇಯರ್ ಇಂದಿರಾ, ಸೇರಿದಂತೆ ಜೆಡಿಎಸ್ ನ ಮುಖಂಡರು ಸೇರಿದಂತೆ ಇತರರು ಭಾಗವಹಿಸಿದ್ದರು.

Related Articles

Leave a comment

Back to Top

© 2015 - 2017. All Rights Reserved.