23ನೇ ಚಳಿಗಾಲದ ಒಲಿಂಪಿಕ್ಸ್‌ ಆರಂಭ: ಭಾರತದಿಂದ ಇಬ್ಬರು ಸ್ಪರ್ಧೆ

Kannada News, Sports No Comments on 23ನೇ ಚಳಿಗಾಲದ ಒಲಿಂಪಿಕ್ಸ್‌ ಆರಂಭ: ಭಾರತದಿಂದ ಇಬ್ಬರು ಸ್ಪರ್ಧೆ 157

ದಕ್ಷಿಣ ಕೊರಿಯಾ: 23ನೇ ಚಳಿಗಾಲದ ಒಲಿಂಪಿಕ್ಸ್‌ ಆರಂಭಗೊಂಡಿದ್ದು, ಫೆ. 25ರವರೆಗೂ ನಡೆಯಲಿದೆ. ಕ್ರೀಡಾಕೂಟಕ್ಕೆ ದಕ್ಷಿಣ ಕೊರಿಯಾದ ಪೈಯೋಂಗ್ಚಂಗ್ ಆತಿಥ್ಯ ವಹಿಸಲಿದೆ.

ಕ್ರೀಡಾಕೂಟದಲ್ಲಿ 15 ಕ್ರೀಡೆಗಳ 102 ಸ್ಪರ್ಧೆಗಳು ನಡೆಯಲಿದ್ದು, 92 ದೇಶಗಳ 2952 ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಇಕ್ವೆಡಾರ್, ಎರಿಟ್ರಿಯಾ, ಕೊಸೊವೊ, ಮಲೇಷ್ಯಾ, ನೈಜೀರಿಯಾ ಹಾಗೂ ಸಿಂಗಾಪುರ್ ದೇಶಗಳು ಪಾಲ್ಗೊಳ್ಳುತ್ತಿವೆ.

ಭಾರತದಿಂದ ಇಬ್ಬರು ಮಾತ್ರ:

ಭಾರತದಲ್ಲಿ ಚಳಿಗಾಲದ ಕ್ರೀಡೆಗಳು ಅಷ್ಟು ಜನಪ್ರಿಯವಲ್ಲ. ಆದರೂ ಒಲಿಂಪಿಕ್ಸ್‌’ನಲ್ಲಿ ಇಬ್ಬರು ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಲೂಜ್‌’ನಲ್ಲಿ ಶಿವಕೇಶವನ್ ಹಾಗೂ ಕ್ರಾಸ್ ಕಂಟ್ರಿ ಸ್ಕೀಯಿಂಗ್‌’ನಲ್ಲಿ ಜಗದೀಶ್ ಸಿಂಗ್ ಸ್ಪರ್ಧೆ ಗಿಳಿಯುತ್ತಿದ್ದಾರೆ. ಶಿವ ಕೇಶವನ್‌’ಗಿದು ಸತತ 6ನೇ ಒಲಿಂಪಿಕ್ಸ್ ಆಗಿದ್ದು, ಈ ಕ್ರೀಡಾಕೂಟದ ಬಳಿಕ ಅವರು ನಿವೃತ್ತಿ ಘೋಷಿಸುವುದಾಗಿ ಹೇಳಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.