ಇಂದಿನಿಂದ ರಾಹುಲ್ ಗಾಂಧಿ ರಾಜ್ಯ ಪ್ರವಾಸ: ಬಿಜೆಪಿ’ಯಿಂದ ದಿಢೀರ್ ಸ್ಲಮ್ ವಾಸ್ತವ್ಯ

BREAKING NEWS, Kannada News, Regional, Top News No Comments on ಇಂದಿನಿಂದ ರಾಹುಲ್ ಗಾಂಧಿ ರಾಜ್ಯ ಪ್ರವಾಸ: ಬಿಜೆಪಿ’ಯಿಂದ ದಿಢೀರ್ ಸ್ಲಮ್ ವಾಸ್ತವ್ಯ 21

ಬೆಂಗಳೂರು: ಇಂದಿನಿಂದ 4 ದಿನಗಳ ಕಾಲ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ‘ಜನಾಶೀರ್ವಾದ ಯಾತ್ರೆ’ ಹೆಸರಲ್ಲಿ ಈ ಯಾತ್ರೆ ನಡೆಯಲಿದೆ. ಆದರೆ ಬಿಜೆಪಿಯಲ್ಲಿ ದಿಢೀರ್ ಬೆಳವಣಿಗೆ ನಡೆದಿದ್ದು ರಾಜ್ಯದಾದ್ಯಂತ ಸ್ಲಮ್ ವಾಸ್ತವ್ಯ ಕೈಗೊಂಡಿದೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆಯಿಂದ ರಾಹುಲ್ ಅವರ ಯಾತ್ರೆ ಆರಂಭವಾಗಲಿದೆ. ಜನಾಶೀರ್ವಾದ ಯಾತ್ರೆಗೆ ವಿಶೇಷ ಬಸ್ಸನ್ನು ಕಾಂಗ್ರೆಸ್ ಸಿದ್ಧಪಡಿಸಿದೆ. ಕಾಂಗ್ರೆಸ್ ಮುಖಂಡರು ಬಸ್ಸನ್ನೇ ಬಳಸಬೇಕೆಂದು ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಇದೇ ಬಸ್’​ನಲ್ಲಿ ಪ್ರಯಾಣ ಬೆಳೆಸಿ ರಾಹುಲ್’ಗೆ ಸಾಥ್ ನೀಡಲಿದ್ದಾರೆ.

ಬಿಜೆಪಿ ಯಿಂದ ದಿಢೀರ್ ಸ್ಲಮ್ ವಾಸ್ತವ್ಯ

ಇನ್ನು ರಾಹುಲ್ ಗಾಂಧಿ ಯಾತ್ರೆ ಹಿನ್ನಲೆ ಬಿಜೆಪಿಯ ಹೊಸ ಚುನಾವಣಾ ತಂತ್ರ ರೂಪಿಸಿದ್ದು ಸ್ಲಮ್ ವಾಸ್ತವ್ಯ ಕೈಗೊಂಡಿದೆ. ಈ ಹಿಂದೆ ಬಿಜೆಪಿ ನಡೆ ಹಳ್ಳಿ ಕಡೆಗೆ ಎಂಬ ಘೋಷವಾಕ್ಯ ಇಟ್ಟುಕೊಂಡು ಹಳ್ಳಿ ಸುತ್ತಿ, ದಲಿತರ ಮನೆಯಲ್ಲಿ ಊಟ ಮಾಡಿದ್ದ ಯಡಿಯೂರಪ್ಪ ಈಗ ದಿಢೀರ್ ಸ್ಲಮ್ ವಾಸ್ತವ್ಯಕ್ಕೆ ಮುಂದಾಗಿದ್ಧಾರೆ.

ನಾಳೆ ರಾತ್ರಿ ಗಾಂಧಿನಗರದ ಸ್ಲಮ್​ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಾಸ್ತವ್ಯ ಹೂಡಲಿದ್ದಾರೆ. ಬೆಳಗ್ಗೆ ಅಲ್ಲೇ ಸಮಾವೇಶ ನಡೆಸಲಿದ್ಧಾರೆ. ಯಡಿಯೂರಪ್ಪ ವಾಸ್ತವ್ಯ ಹೂಡಲಿರುವ ಸ್ಲಮ್​ನಲ್ಲೇ ಮಾಜಿ ಡಿಸಿಎಂ ಆರ್.ಅಶೋಕ್, ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಸಹ ವಾಸ್ತವ್ಯ ಹೂಡುತ್ತಿದ್ದಾರೆ.

ಸಾಂಕೇತಿಕವಾಗಿ ಒಂದು ದಿನ ಯಡಿಯೂರಪ್ಪ ಸ್ಲಮ್ ವಾಸ್ತವ್ಯ ಮಾಡುತ್ತಿದ್ದು, ಪ್ರತಿ ಕ್ಷೇತ್ರದಲ್ಲಿ ಆಯಾ ಸ್ಥಳೀಯ ನಾಯಕರು, ಶಾಸಕರು ಸ್ಲಮ್ ವಾಸ್ತವ್ಯ ಮಾಡುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ, ಇತರೆ ಶಾಸಕರು ಸಹ ಸ್ಮಮ್ ವಾಸ್ತವ್ಯಕ್ಕೆ ಅಣಿಯಾಗುತ್ತಿದ್ದಾರೆ.

ಹುಬ್ಬಳ್ಳಿಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸ್ಲಮ್​ನಲ್ಲಿ ವಾಸ್ತವ್ಯ ಹೂಡಿದರೆ, ಅತ್ತ, ಶಿವಮೊಗ್ಗದಲ್ಲಿ ಪರಿಷತ್ ನಾಯಕ ಕೆ.ಎಸ್. ಈಶ್ವರಪ್ಪ ಸ್ಲಮ್ ನಿವಾಸಿಗಳ ಜೊತೆ ರಾತ್ರಿ ಕಳೆಯುತ್ತಿದ್ದಾರೆ. ಬಿಜೆಪಿಯ ಫೈರ್ ಬ್ರಾಂಡ್ ನಾಯಕಿ ಶೋಭಾ ಕರಂದ್ಲಾಜೆ, ಸಿ.ಎಂ. ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿನಲ್ಲಿ ಸ್ಲಮ್ ವಾಸ್ತವ್ಯಕ್ಕೆ ಮುಂದಾಗಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.