ಸ್ವಾಭಿಮಾನಕ್ಕಾಗಿ ನಾನು ಪ್ರಾಣ ಬೇಕಾದ್ರು ಬಿಡ್ತೆನೆ ಆದ್ರೆ ಕಾಂಪ್ರಮೈಸ್ ಮಾಡ್ಕೊಳ್ಳೊಲ್ಲ: ಹೆಚ್.ಡಿ ದೇವೇಗೌಡ

BREAKING NEWS, Kannada News, Regional, Top News No Comments on ಸ್ವಾಭಿಮಾನಕ್ಕಾಗಿ ನಾನು ಪ್ರಾಣ ಬೇಕಾದ್ರು ಬಿಡ್ತೆನೆ ಆದ್ರೆ ಕಾಂಪ್ರಮೈಸ್ ಮಾಡ್ಕೊಳ್ಳೊಲ್ಲ: ಹೆಚ್.ಡಿ ದೇವೇಗೌಡ 21

ಮೈಸೂರು: ನಗರದ ಮೈಸೂರು ವಿಶ್ವ ವಿದ್ಯಾನಿಲಯದ ಸೆನೆಟ್ ಭವನದಲ್ಲಿ ಹೆಚ್ ಡಿ ದೇವೇಗೌಡರ ಸಾಧನೆಗಳ ಕುರಿತ ‘ಸಾಧನ ಶೀಖರಾರೋಹಿಣ’ ಪುಸ್ತಕ ಪರಿಷ್ಕೃತ ಪರಿವರ್ಧಿತ ಆವೃತ್ತಿಯನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಲೋಕಾರ್ಪಣೆಗೊಳಿಸಿದರು.

ಪುಸ್ತಕ ಬಿಡುಗಡೆ ನಂತರ ಮಾತನಾಡಿದ ಹೆಚ್.ಡಿ ದೇವೇಗೌಡ ಅವರು ಡಾ ಪ್ರಧಾನ್ ಗುರುದತ್ ನನ್ನ ಹನ್ನೊಂದು ಒಳ್ಳೆ ವಿಚಾರಗಳನ್ನ ಪುಸ್ತಕದಲ್ಲಿ ಉಲ್ಲೇಕ ಮಾಡಿದ್ದಾರೆ. ಆದರೆ ಅವರು ನನ್ನ ಕೆಲ ದೋಷಗಳನ್ನು ಹುಡುಕಿ ಬರೆಯಬೇಕಿತ್ತು. ನಾನು ಸಹ ಸಾಕಷ್ಟು ತಪ್ಪು ಮಾಡಿದ್ದೆನೆ. ಅದಕ್ಕೆ ತಕ್ಕ ಶಿಕ್ಷೆಯೂ ಆಗಿದೆ ಎಂದರು.

ಇನ್ನು ತಮ್ಮ ರಾಜಕೀಯ ಜೀವನದ ಘಟನೆಗಳನ್ನು ಮೆಲುಕು ಹಾಕುತ್ತ 1979 ರಲ್ಲಿ ಜನತಾ ಸರ್ಕಾರ ಅಧಿಕಾರಕ್ಕೆ ಬಂದಿತು. ನನ್ನ ಬಳಿ ನಯಾ ಪೈಸೆ ಇರಲಿಲ್ಲ. ಆ ವೇಳೆ ಜನತಾ ಸರ್ಕಾರ ಕುಸಿದು ಹೋಯ್ತು. ಆ ಸಂದರ್ಭದಲ್ಲಿ ಸುಮಾರು 8 ಲಕ್ಷ ವೆಚ್ಚವಾಗಿತ್ತು. ನನಗೆ ಹಣ ಕೊಡ್ತಿನಿ ಎಂದು ಹೇಳಿದ್ದ ವ್ಯಕ್ತಿ ಕೈ ಕೊಟ್ಟರು. ನನ್ನ ಕೋ ಬ್ರದರ್ ಕ್ಯಾನ್ಸರ್ ನಿಂದ ಅಸುನೀಗಿದ ಬಳಿಕ ಒಂದಷ್ಟು ಹಣ ಬಂದಿತ್ತು ಅವರ ಕುಟುಂಬಕ್ಕೆ ನೆಲೆ ಒದಗಿಸುವ ಜವಬ್ದಾರಿ ಕೂಡ ಇತ್ತು. ಈ ವೇಳೆ ಅಂದಿನ ಮುಖ್ಯಮಂತ್ರಿ ದಿ ದೇವರಾಜ ಅರಸು ಅವರು ನನ್ನ ಹೊತೆ ನಿನು ಬಾ ನಿನ್ನ ಸಾಲ ಸಾಲ ನಾನೆ ತೀರಿಸ್ತಿನಿ ಎಂದು ಹೇಳಿದ್ದರು. ಆದರೆ ನಾನು ಮೈಸೂರಿನ ನನ್ನ ಮನೆಯನ್ನ ಮಾರಿ ಸಾಲ ತೀರಿಸಿದ್ದೆ.

ಸ್ವಾಭಿಮಾನಕ್ಕಾಗಿ ನಾನು ಪ್ರಾಣ ಬೇಕಾದ್ರು ಬಿಡ್ತೆನೆ ಆದ್ರೆ ಕಾಂಪ್ರಮೈಸ್ ಮಾಡ್ಕೊಳ್ಳೊಲ್ಲ. ಸತ್ಯವನ್ನ ಹೇಳಿದರೆ ಇವತ್ತಿನ ರಾಜಕಾರಣದಲ್ಲಿ ಬದುಕೋದು ಕಷ್ಟ. ಪ್ರಸ್ತುತ ರಾಜಕಾರಣ ಬಹಳ ಕಷ್ಟ ಇದೆ. ಅಧಿಕಾರದ ವ್ಯಾಮೋಹ ತುಂಬ ಕೆಟ್ಟದ್ದು. ಶಾಸಕರು, ಸಚಿವರು ನಂತರ ಮುಖ್ಯಮಂತ್ರಿ ಆಗಬೇಕು ಅನ್ನಿಸುತ್ತದೆ. ದೇವರಾಜ ಅರಸು ಅವರು ಕಾಂಗ್ರೆಸ್ ನಿಂದ ಹೊರ ಹೋದ ಬಳಿಕ ಇಂದಿರಾ ಗಾಂಧಿ ಅವರು ನನ್ನ ಕರೆಸಿ ಕಾಂಗ್ರೆಸ್ ಸೇರುವಂತೆ ಆಹ್ವಾನ ನೀಡಿದ್ದರು. ಆ ಆಹ್ವಾನವನ್ನ ನಾನು ತಿರಸ್ಕರಿಸಿದ್ದೆ. ಇಂದಿರಾ ಗಾಂಧಿ ನನ್ನ ಬಗ್ಗೆ ಅಪಾರ ಗೌರವ ಹೊಂದಿದ್ದರು.

ಪ್ರಸ್ತುತ ದೇಶದ ಪರಿಸ್ಥಿತಿ ದಾರಿ ತಪ್ಪುತ್ತಿದೆ. ಇದನ್ನ ಸರಿಪಡಿಸುವವರ್ಯಾರು ಎಂದು ಗೊತ್ತಿಲ್ಲ. ಆದರೆ ಪ್ರಜಾಪ್ರಭುತ್ವಕ್ಕೆ ಆ ಶಕ್ತಿ ಇದೆ. ಸರಿ ಪಡೆಸುವ ಜವಾಬ್ದಾರಿ ಜನ ಸಾಮಾನ್ಯರ ಮೇಲಿದೆ. ನಾನು ಪ್ರಧಾನಿ ಯಾಗಿದ್ದಾಗ ದಿನದ 20 ಗಂಟೆ ಕೆಲಸ ಮಾಡ್ತಿದ್ದೆ. ಯಾವ ಕ್ಷಣದಲ್ಲಿ ಕಾಂಗ್ರೆಸ್ ನವರು ನನ್ಮ ಅಧಿಕಾರದಿಂದ ಹೋಡಿಸ್ತಾರೋ ಅನ್ನೊ ಭಯದಲ್ಲೆ ಕೆಲಸ ಮಾಡಿ ಮುಗಿಸಿದ್ದೆ.

ಅಧಿಕಾರದಲ್ಲಿರುವವರು ತಾವು ಒಂದು ಸಣ್ಣ ತಪ್ಪು ಮಾಡಿದರೂ ಎಲ್ಲಿ ಯಾರಿಗೆ ಕಷ್ಟ, ನೋವು ಆಗುತ್ತದೆ ಎಂದು ಯೋಚಿಸಬೇಕು. ಪ್ರಜೆಗಳ ರಕ್ಷಣೆ ನಮ್ಮ ಮೇಲಿದೆ. ನಾನುಯಾವುದೆ ನಿರ್ಣಯ ಕೈಗೊಂಡ ರಾತ್ರಿ ಮರು ಆಲೋಚನೆ ಮಾಡ್ತಿದೆ. ಈಗಲೂ ನರೇಂದ್ರ ಮೋದಿ ಅವರು ಸಣ್ಣಪುಟ್ಟ ತಪ್ಪು ಮಾಡಿದಾಗ ಬೇಟಿಯಾದ ವೇಳೆ ತಿಳಿ ಹೇಳಿದ್ದೆನೆ ಎಂದರು.

ನನ್ನ ಅಚ್ಚು ಮೆಚ್ಚಿನ ಸಿ ಎಂ ಅಂದ್ರೆ ಡಿ ದೇವರಾಜು ಅರಸು ಅವರು. ತನ್ನ ತಪ್ಪನ್ನ ತಿದ್ದಿಕೊಂಡು ಮರು ಉತ್ತರ ನೀಡ್ತಿದ್ದರು ಅವರು. ಅಧಿಕಾರ ಅನ್ನೊದು ಬಿಸಿಲು ಕುದುರೆ ಇದ್ದಹಾಗೆ. ನನಗೆ ಅಧಿಕಾರದ ವ್ಯಾಮೋಹ ಇಲ್ಲಾ ಆದ್ರೆ ದೇಶದ ಪರಿಸ್ಥಿತಿ ನೋಡಿಕೊಂಡು ಸುಮ್ಮನೆ ಕುಳಿತಿರಲು ಸಾಧ್ಯವಾಗ್ತಿಲ್ಲ. ನಾನು ತಪ್ಪು ಮಾಡಿದ್ರೆ ಯಾರಾದ್ರು ಹೇಳಿ ಆ ತಪ್ಪನ್ನ ಪುಸ್ತಕದಲ್ಲಿ ಸೇರಿಸ್ತೆನೆ ಎಂದರು.

ಕಾರ್ಯಕ್ರಮದಲ್ಲಿ ಚೆನ್ನಮ್ಮ ದೇವೇಗೌಡ, ಜೆಡಿಎಸ್ ನ ಪ್ರೊ.ಕೆ.ಎಸ್.ರಂಗಪ್ಪ, ಪುಸ್ತಕ ರಚಿಸಿರುವ ಡಾ. ಪ್ರಸಾದ್ ಗುರುದತ್ತ, ಡಾ. ಸಿ. ನಾಗಣ್ಣ, ಮಂಗಳೂರು ಮತ್ತು ಗೋವಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ. ಬಿ ಷೇಕ್ ಅಲಿ ಅವರು ಉಪಸ್ಥಿತರಿದ್ದರು.

Related Articles

Leave a comment

Back to Top

© 2015 - 2017. All Rights Reserved.