ಕೊನೆಯಾಸೆ ತೀರಿದ ಬಳಿಕ ಕೊನೆಯುಸಿರೆಳೆದ ದರ್ಶನ್ ಅಭಿಮಾನಿ

BREAKING NEWS, Entertainment, Kannada News, Regional, Top News No Comments on ಕೊನೆಯಾಸೆ ತೀರಿದ ಬಳಿಕ ಕೊನೆಯುಸಿರೆಳೆದ ದರ್ಶನ್ ಅಭಿಮಾನಿ 28

ಶಿವಮೊಗ್ಗ: ಕಳೆದ ಹಲವು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಟ್ಟಾ ಅಭಿಮಾನಿ ಶಿವಮೊಗ್ಗದ ರೇವಂತ್ ಶಿವಮೊಗ್ಗದ ಸ್ವಗ್ರಹದಲ್ಲಿ ಶನಿವಾರ ಸಂಜೆ 4.30 ಕ್ಕೆ ಮೃತರಾಗಿದ್ದಾರೆ.

ಶುಕ್ರವಾರವಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ವಿಡಿಯೋಕಾಲ್​ನಲ್ಲಿ ಮಾತನಾಡಿದ್ದ ರೇವಂತ್ ಮೃತಪಟ್ಟಿದ್ದಾರೆ.

ಮೂಳೆ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರಿಗೆ ವಿಷಯ ತಿಳಿದಿರಲಿಲ್ಲ. ವೈದ್ಯರ ಸಲಹೆ ಮೇರೆಗೆ ಕಾಲು ನೋವಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ರೇವಂತ್​ಗೆ ತಿಳಿಸಲಾಗಿತ್ತು. ರೇವಂತ್​ನೊಂದಿಗೆ ವಿಡಿಯೋಕಾಲ್​ನಲ್ಲಿ ಮಾತನಾಡುವಾಗ ಆತನಿಗೆ ಕ್ಯಾನ್ಸರ್ ಇರುವ ವಿಷಯ ತಿಳಿಸಬೇಡಿ ಎಂದು ದರ್ಶನ್​ಗೆ ಮುಂಚಿತವಾಗಿಯೇ ಮನವಿ ಮಾಡಲಾಗಿತ್ತು.

ದರ್ಶನ್ ಅಭಿಮಾನಿ ರೇವಂತ್ ಪ್ರತಿ ವರ್ಷ ದರ್ಶನ್ ಜನ್ಮದಿನದಂದು ಬೆಂಗಳೂರಿಗೆ ತೆರಳಿ ಶುಭಾಶಯ ಕೋರುತ್ತಿದ್ದರು. ಈ ವರ್ಷ ಫೆ. 16ರಂದು ನೆಚ್ಚಿನ ನಟನಿಗೆ ಜನ್ಮ ದಿನದ ಶುಭಾಶಯ ಕೋರಲು ಬೆಂಗಳೂರಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂಬ ಚಿಂತೆಯಲ್ಲಿದ್ದರು.

ವಿಷಯ ತಿಳಿದ ದರ್ಶನ್ ಶುಕ್ರವಾರ ಸ್ನೇಹಿತರ ಮೊಬೈಲ್​ಗೆ ವಿಡಿಯೋ ಕಾಲ್ ಮಾಡಿ ರೇವಂತ್ ಮತ್ತು ಆತನ ತಾಯಿಯೊಂದಿಗೆ ಮಾತನಾಡಿ ಧೈರ್ಯ ತುಂಬಿದ್ದರು. ಶೀಘ್ರದಲ್ಲೇ ಶಿವಮೊಗ್ಗಕ್ಕೆ ಬಂದು ಭೇಟಿ ಮಾಡುತ್ತೇನೆ ಎಂದು ಹೇಳಿದ್ದರು.

Related Articles

Leave a comment

Back to Top

© 2015 - 2017. All Rights Reserved.