ಮಹಿಳಾ ಪೈಲಟ್‌ ಸಮಯಪ್ರಜ್ಞೆ 261 ಪ್ರಯಾಣಿಕರ ಜೀವರಕ್ಷಣೆ

Kannada News, National, Top News No Comments on ಮಹಿಳಾ ಪೈಲಟ್‌ ಸಮಯಪ್ರಜ್ಞೆ 261 ಪ್ರಯಾಣಿಕರ ಜೀವರಕ್ಷಣೆ 12

ಹೊಸದಿಲ್ಲಿ: ಏರ್ ಇಂಡಿಯಾದ ಮಹಿಳಾ ಪೈಲಟ್‌ ಸಮಯಪ್ರಜ್ಞೆ ಯಿಂದ ಎರಡೂ ವಿಮಾನಗಳಲ್ಲಿದ್ದ 261 ಪ್ರಯಾಣಿಕರ ಜೀವರಕ್ಷಣೆ ಮಾಡಿದ ಪ್ರಸಂಗವೊಂದು ನಡೆದಿದೆ.

ಮುಂಬೈಯಲ್ಲಿ ವಿಸ್ತಾರ ಹಾಗೂ ಇಂಡಿಯನ್ ಏರ್‌ಲೈನ್ಸ್ ವಿಮಾನಗಳು ಪರಸ್ಪರ ಢಿಕ್ಕಿಯಾಗುವುದು ಕೂದಲೆಳೆ ಅಂತರದಲ್ಲಿ ತಪ್ಪಿದ ಘಟನೆ ನಡೆದಿದೆ. ಆದರೆ ಈ ವೇಳೆ ಸಮಯಪ್ರಜ್ಞೆ ಮೆರೆದು ಎರಡೂ ವಿಮಾನಗಳಲ್ಲಿದ್ದ 261 ಯಾನಿಗಳ ಜೀವರಕ್ಷಣೆಯನ್ನು ಇಂಡಿಯಾ ವಿಮಾನ ಚಲಾಯಿಸುತ್ತಿದ್ದ ಮಹಿಳಾ ಪೈಲಟ್‌ಗೆ ಸಲ್ಲುತ್ತದೆ.

ಈ ಆತಂಕದ ಸನ್ನಿವೇಶದಲ್ಲಿ ನಿಯಂತ್ರಣ ಕಚೇರಿ ಎರಡೂ ವಿಮಾನಗಳ ಕಾಕ್‌ಪಿಟ್ ಜತೆಗೆ ಸಂಪರ್ಕ ಸಾಧಿಸುವಲ್ಲಿ ಸ್ವಲ್ಪಮಟ್ಟಿನ ಗೊಂದಲ ಸೃಷ್ಟಿಯಾಗಿತ್ತು. ಏರ್‌ ಇಂಡಿಯಾದ ಏರ್‌ಬಸ್ ಎ-319 ಮುಂಬೈನಿಂದ ಭೋಪಾಲ್‌ಗೆ ಹೊರಟಿದ್ದರೆ, ವಿಸ್ತಾರದ ಎ-320 ವಿಮಾನ ದಿಲ್ಲಿಯಿಂದ ಪುಣೆಗೆ ತೆರಳುತ್ತಿತ್ತು. 29 ಸಾವಿರ ಅಡಿ ಎತ್ತರದಲ್ಲಿ ಹಾರಬೇಕಿದ್ದ ವಿಸ್ತಾರ ವಿಮಾನ 27,100 ಅಡಿಯಲ್ಲಿ ಹಾರಾಡಿದ್ದೇ ಈ ಗೊಂದಲಕ್ಕೆ ಕಾರಣ ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ. ಹಿನ್ನೆಲೆಯಲ್ಲಿ ವಿಸ್ತಾರ ಏರ್‌ಲೈನ್ಸ್‌ನ ಇಬ್ಬರು ಪೈಲಟ್‌ಗಳು ಅಮಾನತುಗೊಂಡಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.