ಮಗನ ಸಾವಿನ ಸುದ್ದಿ ಕೇಳಿ ಪ್ರಾಣ ಬಿಟ್ಟ ತಂದೆ: ಒಂದೇ ಚಿತೆಯಲ್ಲಿ ಅಗ್ನಿ ಸ್ಪರ್ಶ

Kannada News, Regional, Top News No Comments on ಮಗನ ಸಾವಿನ ಸುದ್ದಿ ಕೇಳಿ ಪ್ರಾಣ ಬಿಟ್ಟ ತಂದೆ: ಒಂದೇ ಚಿತೆಯಲ್ಲಿ ಅಗ್ನಿ ಸ್ಪರ್ಶ 15

ಮೈಸೂರು: ಅನಾರೋಗ್ಯದಿಂದ ಮಗ ಮೃತಪಟ್ಟ ಸುದ್ದಿ ಕೇಳಿ ತಂದೆಯೊಬ್ಬರು ನಿಧನರಾದ ಘೊರ ಘಟನೆಯೊಂದು ನಡೆದಿದೆ.

ಮೈಸೂರಿನ ಬೆಳವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಭೈರೇಗೌಡ(33) ಕ್ಯಾನ್ಸರ್ ನಿಂದ ಮೃತಪಟ್ಟಿದ್ದರು. ಈ ವೇಳೆ ಶವ ಯಾತ್ರೆ ನಡೆಸುವ ಸಂದರ್ಭದಲ್ಲಿ ತಂದೆ ಪುಟ್ಟೇಗೌಡ(65) ಅವರಿಗೆ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ.

ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಮಗನ ಈ ಕಾಯಿಲೆ ಗುಣಪಡಿಸಲು ತಂದೆ ಪುಟ್ಟೇಗೌಡ ಸಕಲ ರೀತಿಯ ಪ್ರಯತ್ನ ಪಟ್ಟಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕ್ಯಾನ್ಸರ್ ಪೀಡಿತ ಬೈರೇಗೌಡ ಭಾನುವಾರ ಮೃತಪಟ್ಟಿದ್ದರು.

ಸ್ಮಶಾನದಲ್ಲಿಯೇ ಮಗನ ಶವ ಇಟ್ಟು ತಂದೆ ಪುಟ್ಟೇಗೌನಿಗೆ ಮನೆಯಲ್ಲಿ ವಿಧಿ ವಿಧಾನ ನೆರವೇರಿಸಿ, ತಂದೆ ಮಗನ ಶವಕ್ಕೆ ಒಂದೇ ಚಿತೆಯಲ್ಲಿ ಅಗ್ನಿ ಸ್ಪರ್ಶ ಮಾಡಲಾಯಿತು. ತಂದೆ ಮಗನ ಸಾವು ಮನಕಲಕುವಂತಿತ್ತು.

Related Articles

Leave a comment

Back to Top

© 2015 - 2017. All Rights Reserved.