ಮರ್ಯಾದೆ ಪುರುಷೋತ್ತಮ ಬಾಹುಬಲಿ: ಫ್ರೋ. ಹಂಪ ನಾಗರಾಜಯ್ಯ

News No Comments on ಮರ್ಯಾದೆ ಪುರುಷೋತ್ತಮ ಬಾಹುಬಲಿ: ಫ್ರೋ. ಹಂಪ ನಾಗರಾಜಯ್ಯ 44

ಮೈಸೂರು: ಬಾಹುಬಲಿಯು ರಾಮನ ಹಾಗೆ ಮರ್ಯಾದೆಯ ಪುರುಷ. ತನ್ನ ತಂದೆಯ ಮಾತಿಗಾಗಿ ಆಸ್ತಿ ಬಿಟ್ಟು ವನವಾಸಕ್ಕೆ ಹೋದ ಅದೇ ರೀತಿ ಬಾಹುಬಲಿ ತನ್ನ ತಮ್ಮನಿಗಾಗಿ ಆಸ್ತಿ ಬಿಟ್ಟ. ದಿಗಂಬರರ ಪರಂಪರೆಯಲ್ಲಿ 24 ಕಾಮದೇವನಲ್ಲಿ ಬಾಹುಬಲಿ ಪ್ರಥಮ ಎಂದು ಹಿರಿಯ ವಿದ್ವಾಂಸರಾದ ನಾಡೋಜ ಪ್ರೊ. ಹಂಪ ನಾಗರಾಜಯ್ಯ ಅವರು ತಮ್ಮ ತಿಳಿಸಿದರು.

ಮೈಸೂರು ವಿವಿಯ ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ 2018 ಶುಭ ಸಂದರ್ಭದ ನಿಮಿತ್ತ, ಮಹಾಮಸ್ತಕಾಭಿಷೇಕ : ಸಾಂಸ್ಕೃತಿಕ ಆಯಾಮಗಳು ಕುರಿತ ಒಂದು ದಿನದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು ತೀರ್ಥಂಕರ, ಗಣದಾರಿ ಮತ್ತು ಸಾಮಾನ್ಯ ಕೇವಲಿ ಎಂಬ ವರ್ಗಗಳಿದ್ದು ಬಾಹುಬಲಿ ಸಾಮಾನ್ಯ ಕೇವಲಿ ವರ್ಗಕ್ಕೆ ಸೇರಿದವನಾಗಿದ್ದು ಅಸಮಾನ್ಯ ಪೂಜೆಗೆ ಕಾರಣನಾಗಿದ್ದು ಆತ ಮಾಡಿದ ತಪಸ್ಸಿನಿಂದ ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿವಿಯ ಕುಲಪತಿಗಳಾದ ಫ್ರೋ. ಪದ್ಮಾಶೇಖರ್, ಮೈಸೂರು ವಿವಿಯ ಕುಲಪತಿಗಳಾದ ಫ್ರೋ. ಬಸವರಾಜು ಹಾಗೂ ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದ ಅಧ್ಯಕ್ಷರಾದ ಫ್ರೋ. ಎನ್. ಎಂ. ತಳವಾರ ಅವರು ಉಪಸ್ಥಿತರಿದ್ದರು.

ವರದಿ: ಶ್ವೇತಾ. ಜಿ

Related Articles

Leave a comment

Back to Top

© 2015 - 2017. All Rights Reserved.