ತನ್ನ ಕಣ್ಣ್ ಸನ್ನೆಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಮೋಡಿ ಮಾಡಿದಾಕೆ ಯಾರು ಗೊತ್ತಾ..? ಈಕೆ ಮಾಡಿರುವ ಮೋಡಿ ಅಷ್ಟಿಷ್ಟಲ್ಲ..!

BREAKING NEWS, Entertainment, Kannada News, Top News No Comments on ತನ್ನ ಕಣ್ಣ್ ಸನ್ನೆಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಮೋಡಿ ಮಾಡಿದಾಕೆ ಯಾರು ಗೊತ್ತಾ..? ಈಕೆ ಮಾಡಿರುವ ಮೋಡಿ ಅಷ್ಟಿಷ್ಟಲ್ಲ..! 87

ಹೈದರಾಬಾದ್: ಪ್ರೇಮಿಗಳ ದಿನಚಾರಣೆ ವಿಶೇಷವಾಗಿ ಬಿಡುಗಡೆಯಾಗಿರುವ ಮಲೆಯಾಳಂ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈಗಾಗಲೇ ಈ ಹಾಡು 40 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗುವ ಮೂಲಕ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ವಿಡಿಯೋ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಮಲೆಯಾಳಂನ `ಒರು ಆಡಾರ್ ಲವ್’ ಹೆಸರಿನ ಸಿನಿಮಾದ `ಮಾಣಿಕ್ಯಾ ಮಾಲಾರಾಯಾ ಪೂವಿ’ ಹಾಡಿನಲ್ಲಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ಣುಗಳು ಸಿನಿಪ್ರಿಯರನ್ನು ಮೋಡಿ ಮಾಡಿದೆ.

ಹಾಡಿನಲ್ಲಿನ ಆಕೆಯ ಕಣ್ಣಿನ ನೋಟ ಎಂಥವರನ್ನು ಕ್ಷಣಕಾಲ ಮಗ್ನಗೊಳಿಸುವಂತೆ ಮಾಡುತ್ತಿದೆ. ಪ್ರಸ್ತುತ ಈ ಹಾಡಿನ ತುಣುಕನ್ನು ಪ್ರತಿ ಹುಡುಗರು ಸಾಮಾಜಿಕ ಜಾಲತಾಣಗಳ ಸ್ಟೇಟಸ್ ಹಾಕುತ್ತಿದ್ದಾರೆ. ಅಲ್ಲದೆ ಕನ್ನಡ ಸೇರಿದಂತೆ ವಿವಿಧ ಹಾಡುಗಳು ಹಾಗೂ ವಿವಿಧ ನಟರ ತುಣುಕುಗಳನ್ನು ಸೇರಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇನ್ನು ನಟಿ ಪ್ರಿಯಾ ಪ್ರಕಾಶ್ ಕೇರಳದ ತ್ರಿಶ್ಯೂರ್ ಮೂಲದವರು. ಪ್ರಸ್ತುತ ಅಲ್ಲಿನ ಸ್ಥಳೀಯ ಕಾಲೇಜಿನಲ್ಲಿ ಬಿಕಾಂ ಪದವಿ ಮಾಡುತ್ತಿದ್ದಾರೆ. ಸಿನಿಮಾ ಆಡಿಷನ್ ವೇಳೆ ಇವರಿಗೆ ಸಣ್ಣ ಪಾತ್ರವನ್ನು ನೀಡಲಾಗಿದ್ದು, ಆದರೆ ಇದೀಗ ಈ ಪಾತ್ರದ ಮೂಲಕವೇ ಎಲ್ಲರ ಗಮನಸೆಳೆದಿದ್ದಾರೆ. ಚಿತ್ರದ ಹಾಡು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗುತ್ತಿದಂತೆ ಮಲಯಾಳಂ ಮಾತ್ರವಲ್ಲದೇ ಟಾಲಿವುಡ್, ಬಾಲಿವುಡ್ ನಲ್ಲೂ ಹೆಚ್ಚು ವೈರಲ್ ಆಗಿದೆ.

Related Articles

Leave a comment

Back to Top

© 2015 - 2017. All Rights Reserved.