ಹೆಚ್.ಸಿ ಮಹದೇವಪ್ಪ ಷಡ್ಯಾಂತರದಿಂದ ಮ್ಯಾಚ್ ಫಿಕ್ಸಿಂಗ್: ಅಶ್ವಿನ್ ಕುಮಾರ್’ಗೆ ಜೆಡಿಎಸ್’ನಿಂದ ಟಿಕೆಟ್ ನೀಡದಿರಲು ಮನವಿ

Kannada News, Regional No Comments on ಹೆಚ್.ಸಿ ಮಹದೇವಪ್ಪ ಷಡ್ಯಾಂತರದಿಂದ ಮ್ಯಾಚ್ ಫಿಕ್ಸಿಂಗ್: ಅಶ್ವಿನ್ ಕುಮಾರ್’ಗೆ ಜೆಡಿಎಸ್’ನಿಂದ ಟಿಕೆಟ್ ನೀಡದಿರಲು ಮನವಿ 31

ಮೈಸೂರು: 2018ರ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ದಿನೇ ದಿನೇ ರಾಜಕೀಯ ರಂಗೇರುತ್ತಿದೆ. ಮೊದಲು ಟಿಕೇಟ್ ಗಾಗಿ ಪಕ್ಷ ಪಕ್ಷಗಳ ನಡುವೇ ಗುದ್ದಾಟ ನಡೆಯುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಪಕ್ಷದೊಳಗೆ ಇರುವ ಟಿಕೆಟ್ ಆಕಾಂಕ್ಷೀಗಳ ನಡುವೆಯೇ ಟಿಕೆಟ್ ಗಾಗಿ ಶೀತಲ ಸಮರ ನಡೆಯುತ್ತಿದೆ.

ಈ ಚುನಾವಣಿ ತೀವ್ರ ಕುತೂಹಲ ದಿಂದ ಕೂಡಿದ್ದು, ಟಿ.ನರಸಿಪುರ ಮೀಸಲು ಕ್ಷೇತ್ರದ ಜೆಡಿಎಸ್ ನ ಅಭ್ಯರ್ಥಿಯಾಗ ಬಯಸುವವರ ಪಟ್ಟಿಯಲ್ಲಿ ಹತ್ತು ಜನರ ಹೆಸರಿದೆ. ಅದರಲ್ಲಿ ಅಶ್ವಿನ್ ಕುಮಾರ್ ಅವರಿಗೆ ಟಿಕೆಟ್ ನೀಡಲಾಗುವುದು ಎಂಬ ಸುಳಿವು ಬಂದಿದ್ದು ಇದರಿಂದ ಎಚ್ಚೇತ್ತ ಉಳಿದ ಅಭ್ಯರ್ಥಿಗಳು ಒಗ್ಗಟ್ಟಿನಿಂದ ರಾಷ್ಟ್ರೀಯ ಮತ್ತು ರಾಜ್ಯ ಅಧ್ಯಕ್ಷ ರುಗಳಾದ ಹೆಚ್ ಡಿ ದೇವೆಗೌಡ, ಕುಮಾರಸ್ವಾಮಿ ರವರಲ್ಲಿ ಮನವಿ ಸಲ್ಲಿಸಿದ್ದಾರೆ .

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಟಿಕೆಟ್ ಆಕಾಂಕ್ಷಿಗಳು ಮಾತನಾಡಿ ಇತ್ತೀಚಿಗೆ ನಡೆದ ಅಭ್ಯರ್ಥಿ ಗಳ ಚುನಾವಣಾ ಪೂರ್ವ ಸಿದ್ದತಾ ಸಭೆಗೆ ನಮ್ಮ ಜೊತೆ ಟಿಕೆಟ್ ಆಕಾಂಕ್ಷಿ ಯಾಗಿರುವ ಎಂ ಅಶ್ವಿನ್ ಕುಮಾರ್ ಅವರನ್ನು ಏಕಾಏಕಿ ಆಹ್ವಾನಿಸಿದ್ದಾರೆ. ಅದು ನಮಗೆ ಆಶ್ಚರ್ಯ ವನ್ನುಂಟು ಮಾಡಿದೆ, ಹೆಚ್ ಸಿ ಮಹದೇವಪ್ಪ ರವರ ಷಡ್ಯಾಂತರದಿಂದ ಮ್ಯಾಚ್ ಫಿಕ್ಸಿಂಗ್ ಮೂಲಕ ಅಶ್ವಿನ್ ಕುಮಾರ್ ರವರ ಹೆಸರು ಕೇಳಿ ಬಂದಿರುವುದು ನಮ್ಮ ಗಮನಕ್ಕೆ ಬಂದಿದೆ , ಈ ಶಾಸಕ ಮತ್ತು ಮಗನ ಅನುಮಾನಸ್ಪದ ವ್ಯಕ್ತಿ ಅಶ್ವಿನ್ ಕುಮಾರ್ ರವರ ಆಯ್ಕೆ ನಿಜವೇ ಆಗಿದ್ದಲ್ಲಿ ಈ ತೀರ್ಮಾನ ನಮ್ಮ ಪಕ್ಷದ ಘನತೆಯನ್ನು ಕುಗ್ಗಿಸುವಂತಹ ಎನ್ನುವುದು ನಮ್ಮೆಲ್ಲರ ಹಾಗೂ ಕ್ಷೇತ್ರದ ನಿಷ್ಠಾವಂತ ಕಾರ್ಯಕರ್ತರೆಲ್ಲರ ಅಭಿಪ್ರಾಯ ವಾಗಿದೆ , ಆದ್ದರಿಂದ ಎಂ ಅಶ್ವಿನ್ ಕುಮಾರ್ ರವರನ್ನು ಟಿ ನರಸೀಪುರ ಕ್ಷೇತ್ರ ದ ಅಭ್ಯರ್ಥಿ ಯನ್ನಾಗಿ ಆಯ್ಕೆ ಮಾಡಿದ್ದಲ್ಲಿ ಇದನ್ನು ದಯಮಾಡಿ ತಡೆಹಿಡಿಯಬೇಕೆಂದು ಎಲ್ಲರು ಒಗ್ಗಟ್ಟಿನಿಂದ ಮನವಿ ಮಾಡಿಕೊಳ್ಳುತ್ತೆವೆ ಎಂದು ತಿಳಿಸಿದರು.

ಸುದ್ದಿಗೋಷ್ಟಿ ಯಲ್ಲಿ ಕ್ಷೇತ್ರದ ಆಕಾಂಕ್ಷಿ ಗಳಾದ ಪ್ರೊ.ಹೆಚ್.ಗೋವಿಂದಯ್ಯ, ಎಸ್ ಎನ್ ಸಿದ್ದಾರ್ಥ, ಧರಣಿ ಸುಂದರೇಶನ್ , ಬಿ.ಕೆ ಜ್ಞಾನಪ್ರಕಾಶ್ , ಹೆಚ್ ವಾಸು , ಎಸ್ ಮಹೇಶ್ ಕುಮಾರ್ , ಎಸ್ ಶಂಕರ್, ಕಾರ್ಗಳ್ಳಿ ಶಿವಸ್ವಾಮೀ , ಎಂ ಮಹದೇವ ಸ್ವಾಮಿ, ಸಾಮ್ರಾಟ್ ಸುಂದರೇಶನ್ ಉಪಸ್ಥಿತರಿದ್ದರು.

Related Articles

Leave a comment

Back to Top

© 2015 - 2017. All Rights Reserved.