ನಾಡಿನೆಲ್ಲೇಡೆ ಮಹಾಶಿವರಾತ್ರಿಯ ಸಂಭ್ರಮ: ಅರಮನೆಯ ತೀನೇಶ್ವರ ದೇವಾಲಯದಲ್ಲಿ ಶಿವನ ಮೂರ್ತಿಗೆ ಚಿನ್ನದ ಕೊಳಗ ಧಾರಣೆ

BREAKING NEWS, Kannada News, Regional, Top News No Comments on ನಾಡಿನೆಲ್ಲೇಡೆ ಮಹಾಶಿವರಾತ್ರಿಯ ಸಂಭ್ರಮ: ಅರಮನೆಯ ತೀನೇಶ್ವರ ದೇವಾಲಯದಲ್ಲಿ ಶಿವನ ಮೂರ್ತಿಗೆ ಚಿನ್ನದ ಕೊಳಗ ಧಾರಣೆ 25

ಮೈಸೂರು: ನಾಡಿನೆಲ್ಲೇಡೆ ಮಹಾ ಶಿವರಾತ್ರಿ ಆಚರಣೆ ಮನೆಮಾಡಿದ್ದು, ಮೈಸೂರಿನಲ್ಲಿಯೂ ಸಂಭ್ರಮ ಸಡಗರ ಜೋರಾಗಿದೆ.

ಸಾಂಸ್ಕೃತಿಕ ನಗರೀ ಮೈಸೂರಿನಲ್ಲಿ ಶಿವರಾತ್ರಿ ಹಬ್ಬದ ಹಿನ್ನಲೆ ಅರಮನೆ ಆವರಣದಲ್ಲಿರುವ ತೀನೇಶ್ವರ ದೇವಾಲಯದಲ್ಲಿ ಮಹಾ ರುದ್ರಾಭಿಷೇಕ, ಬಿಲ್ಲ ಪತ್ರ, ವಿವಿಧ ಹೂಗಳಿಂದ ವಿಶೇಷ ಪೂಜಾ ಕೈಕಂರ್ಯಗಳು ಜರುಗಿದವು. ಅಲ್ಲದೆ ಶಿವರಾತ್ರಿಯ ವಿಶೇಷವಾಗಿ ಶಿವನ ಮೂರ್ತಿಗೆ ಚಿನ್ನದ ಕೊಳಗವನ್ನು ಧಾರಣೆ ಮಾಡಲಾಗಿದೆ.

ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ ಜನನ ಹೊಂದಿದ ಸಂದರ್ಭದಲ್ಲಿ ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಾಸ್ಥಾನಕ್ಕೆ ಶಿವನ ಮೂರ್ತಿಗೆ 11 ಕೆಜಿ ತೂಕದ ಚಿನ್ನದ ಕೊಳಗವನ್ನು ಉಡುಗೊರೆಯಾಗಿ ನೀಡಿದ್ದರಂತೆ. ಅಂದಿನಿಂದ ಪ್ರತಿ ಶಿವರಾತ್ರಿಯಂದು ವಿಶೇಷವಾಗಿ ಶಿವನ ಮೂರ್ತಿಗೆ ಚಿನ್ನದ ಕೊಳಗವನ್ನು ಧಾರಣೆ ಮಾಡಲಾಗುತ್ತದೆ. ಚಿನ್ನದ ಕೊಳಗ ತೊಟ್ಟು ತ್ರೀನೇಶ್ವರ ಸ್ವಾಮಿ ಕಂಗೊಳಿಸುತ್ತಾನೆ.

ಇನ್ನೂ ಕರ್ನಾಟಕದ ದಕ್ಷಿಣ ಕಾಶಿಯಲ್ಲಿಯೂ ಶಿವರಾತ್ರಿ ಸಂಭ್ರಮ ಮನೆ ಮಾಡಿದ್ದು, ನಂಜುಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಸಾಂಸ್ಕೃತಿಕ ನಗರೀಯ ಪ್ರಮುಖ ಶಿವನ ದೇವಾಲಯಗಳಲ್ಲಿಯೂ ಅಭಿಷೇಕ, ಪೂಜೆ ಪುನಸ್ಕಾರ ನಡೆಯುತ್ತಿದ್ದು, ವಿವಿಧ ಪುಷ್ಪಗಳಿಂದ ದೇವಾಲಯಗಳು ಜಗಮಗಿಸುತ್ತಿದೆ.

Related Articles

Leave a comment

Back to Top

© 2015 - 2017. All Rights Reserved.