ಚಂದ್ರಬಾಬು ನಾಯ್ಡು ದೇಶದ ನಂ.1 ಶ್ರೀಮಂತ ಸಿಎಂ: ಸಿದ್ದರಾಮಯ್ಯ ಅವರು ಎಷ್ಟನೇ ಸ್ಥಾನದಲ್ಲಿದ್ದಾರೆ ಗೊತ್ತಾ..!

BREAKING NEWS, Kannada News, Regional, Top News No Comments on ಚಂದ್ರಬಾಬು ನಾಯ್ಡು ದೇಶದ ನಂ.1 ಶ್ರೀಮಂತ ಸಿಎಂ: ಸಿದ್ದರಾಮಯ್ಯ ಅವರು ಎಷ್ಟನೇ ಸ್ಥಾನದಲ್ಲಿದ್ದಾರೆ ಗೊತ್ತಾ..! 65

ನವದೆಹಲಿ: ದೇಶದ ಶ್ರೀಮಂತ ಹಾಗೂ ಬಡ ಮುಖ್ಯಮಂತ್ರಿ ಪಟ್ಟಿ ಬಿಡುಗಡೆಯಾಗಿದ್ದು ಆಂಧ್ರ ಸಿಎಂ ಎನ್‌. ಚಂದ್ರಬಾಬು ನಾಯ್ಡು ನಂ.1 ಶ್ರೀಮಂತ ಸಿಎಂ ಸ್ಥಾನ ಪಡೆದಿದ್ದಾರೆ. ಇನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 6ನೇ ಸ್ಥಾನದಲ್ಲಿದ್ದಾರೆ.

ಚುನಾವಣಾ ಸುಧಾರಣೆ ಮೇಲೆ ನಿಗಾ ಇಡುವ ಪ್ರಜಾಪ್ರಭುತ್ವ ಸುಧಾರಣಾ ಸಂಘಟನೆ(ಎಡಿಆರ್‌), ದೇಶದ 29 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಆಸ್ತಿಯ ಪಟ್ಟಿಯೊಂದನ್ನು ಸೋಮವಾರ ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ದೇಶದ 6ನೇ ಶ್ರೀಮಂತರಾಗಿ ಸ್ಥಾನ ಪಡೆದಿದ್ದಾರೆ.

ಚುನಾವಣೆ ವೇಳೆ ಸಲ್ಲಿಸಿದ ಅಫಿಡವಿಟ್‌ ಆಧರಿಸಿ ಈ ವರದಿ ತಯಾರಿಸಲಾಗಿದ್ದು, ಅದರನ್ವಯ ಸಿಎಂ ಸಿದ್ದರಾಮಯ್ಯ 13 ಕೋಟಿ ರು. ಆಸ್ತಿಯೊಂದಿಗೆ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದ್ದಾರೆ. ಇನ್ನು ದೇಶದ ನಂ.1 ಸಿಎಂ ಎಂಬ ಪಟ್ಟ177 ಕೋಟಿ ರು. ಆಸ್ತಿ ಹೊಂದಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಮೊದಲ ಸ್ಥಾನದಲ್ಲಿದ್ದಾರೆ. 26 ಲಕ್ಷ ರು. ಮೌಲ್ಯದ ಆಸ್ತಿಯೊಂದಿಗೆ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್‌ ಸರ್ಕಾರ್‌ ಕೊನೇ ಸ್ಥಾನದಲ್ಲಿದ್ದಾರೆ.

ಇದೇ ವೇಳೆ ದೇಶದ 31 ರಾಜ್ಯಗಳ ಪೈಕಿ 28 ರಾಜ್ಯಗಳಲ್ಲಿ ಪುರುಷ ಸಿಎಂಗಳಿದ್ದರೆ, 3 ರಾಜ್ಯಗಳಲ್ಲಿ ಮಹಿಳೆಯರ ಆಡಳಿತವಿದೆ. ಅರುಣಾಚಲ ಪ್ರದೇಶ ಸಿಎಂ ಪೆಮಾ ಖಂಡು (35 ವರ್ಷ) ಅತ್ಯಂತ ಕಿರಿಯ ಸಿಎಂ ಮತ್ತು ಪಂಜಾಬ್‌ ಸಿಎಂ ಅಮರೀಂದರ ಸಿಂಗ್‌ (74) ಅತ್ಯಂತ ಹಿರಿಯ ಸಿಎಂ ಎಂದು ವರದಿ ಹೇಳಿದೆ.

ಯಾರಾರ‍ಯರ ಆಸ್ತಿ ಎಷ್ಟು..?

129 ಕೋಟಿ ರು. ಆಸ್ತಿ ಹೊಂದಿರುವ ಅರುಣಾಚಲ ಪ್ರದೇಶ ಸಿಎಂ ಪೆಮಾ ಖಂಡು ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. 41 ಕೋಟಿ ರು. ಆಸ್ತಿಯೊಂದಿಗೆ ಪಂಜಾಬ್‌ ಸಿಎಂ 3ನೇ ಸ್ಥಾನ, 15 ಕೋಟಿ ರು. ಮೌಲ್ಯದ ಆಸ್ತಿಯೊಂದಿಗೆ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್‌ ರಾವ್‌ 4ನೇ ಸ್ಥಾನ, 14 ಕೋಟಿ ರು. ಆಸ್ತಿಯೊಂದಿಗೆ ಮೇಘಾಲಯ ಸಿಎಂ ಮುಕುಲ್‌ ಸಂಗ್ಮಾ 5ನೇ ಸ್ಥಾನ ಪಡೆದಿದ್ದಾರೆ. ಅರುಣಾಚಲ ಪ್ರದೇಶದ ಸಿಎಂ ಪೆಮಾ ಖಂಡು ಹೊರತುಪಡಿಸಿ, 18 ರಾಜ್ಯಗಳಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿಯ ಯಾವೊಬ್ಬ ಸಿಎಂಗಳು ಸಹ ಟಾಪ್‌ 10 ಪಟ್ಟಿಯಲ್ಲಿ ಇಲ್ಲದಿರುವುದು ವಿಶೇಷ. ಈತನ್ಮಧ್ಯೆ, ದೇಶದ 31 ಮುಖ್ಯಮಂತ್ರಿಗಳ ಪೈಕಿ 25 ಮುಖ್ಯಮಂತ್ರಿಗಳು ಕೋಟ್ಯಾಧಿಪತಿಗಳಾಗಿದ್ದಾರೆ. ಸಿಎಂಗಳ ಸರಾಸರಿ ಆಸ್ತಿ 16.18 ಕೋಟಿ ರು. ಎಂದು ವರದಿ ಹೇಳಿದೆ.

ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿ

  1. ಎನ್‌.ಚಂದ್ರಬಾಬು ನಾಯ್ಡು- 177 ಕೋಟಿ ರು.
  2. ಪೆಮಾ ಖಂಡು- 129 ಕೋಟಿ ರು.
  3. ಕ್ಯಾ.ಅಮರೀಂದರ್‌ ಸಿಂಗ್‌- 48 ಕೋಟಿ ರು.
  4. ಕೆ.ಚಂದ್ರಶೇಖರ್‌ ರಾವ್‌- 15.15 ಕೋಟಿ ರು.
  5. ಮುಕುಲ್‌ ಸಂಗ್ಮಾ- 14.50 ಕೋಟಿ ರು.

ಬಡ ಮುಖ್ಯಮಂತ್ರಿಗಳ ಪಟ್ಟಿ

  1. ಮಾಣಿಕ್‌ ಸರ್ಕಾರ್‌- 26 ಲಕ್ಷ ರು.
  2. ಮಮತಾ ಬ್ಯಾನರ್ಜಿ- 30.45 ಲಕ್ಷ ರು.
  3. ಮೆಹಬೂಬಾ ಮುಫ್ತಿ- 55.96 ಲಕ್ಷ ರು.
  4. ಮನೋಹರ ಲಾಲ್‌ ಖಟ್ಟರ್‌- 61.29 ಲಕ್ಷ ರು.
  5. ರಘುವರ್‌ ದಾಸ್‌- 72.72 ಲಕ್ಷ ರು.

Related Articles

Leave a comment

Back to Top

© 2015 - 2017. All Rights Reserved.