ಫೆ. 17ಕ್ಕೆ ಜೆಡಿಎಸ್ ಬೃಹತ್ ಸಮಾವೇಶ: ಅಂದೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ;- ಹೆಚ್.ಡಿ.ಕೆ

Kannada News, Regional, Top News No Comments on ಫೆ. 17ಕ್ಕೆ ಜೆಡಿಎಸ್ ಬೃಹತ್ ಸಮಾವೇಶ: ಅಂದೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ;- ಹೆಚ್.ಡಿ.ಕೆ 20

ಬೆಂಗಳೂರು: ಈ ಹಿಂದೆ ಹೇಳಿದಂತೆ ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲೇ ಫೆ. 17ರಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ಧಾರೆ.

ರಾಜ್ಯದಲ್ಲಿ ಈ ಬಾರಿ ಸಮ್ಮಿಶ್ರ ಸರ್ಕರ ಬರುವುದೆಂಬ ಭಾವನೆ ಎಲ್ಲೆಡೆ ಇದೆ. ಆದರೆ, ನಾವು ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಫೆ.17 ರಂದು, ಬೆಂಗಳೂರು ನಗರದ ಜನತೆಗೆ ತೊಂದರೆಯಾಗಬಾರದೆಂದು ಯಲಹಂಕದಲ್ಲಿ ಬೃಹತ್ ಜೆಡಿಎಸ್ ಸಮಾವೇಶ ಆಯೋಜಿಸಲಾಗಿದೆ.

ಈ ವೇಳೆ ಕನಿಷ್ಠ 10 ಲಕ್ಷ ಜನ ಸೇರುತ್ತಾರೆ ಎಂಬ ವಿಶ್ವಾಸ ಇದೆ. ಅವರಿಗೆ ನಿರಂತರ ಅನ್ನ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ಕಳೆದ 10 ವರ್ಷದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಾಡಿದ ಅನಾಹುತಗಳ ಬಗ್ಗೆ ಬಹಿರಂಗ ಮಾಡುತ್ತೇವೆ. ಸಮ್ಮಿಶ್ರ ಸರ್ಕಾರ ಬರಬಹುದು ಎಂಬ ಭಾವನೆ ನಾಳಿನ ಜೆಡಿಎಸ್ ಕಾರ್ಯಕ್ರಮದಿಂದ ದೂರವಾಗಲಿದೆ. ಯಾವುದೇ ಸಮಸ್ಯೆಗೆ ಕಾಲಾವಧಿ ನಿಗದಿಪಡಿಸಿ ಪರಿಹಾರ ಕೊಡುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಸಮಾವೇಶದಂದು ಸುಮಾರು 100 ಎಲ್​ಸಿ ಡಿ ವಾಹನಗಳು ಅಂದು ಚಾಲನೆಗೊಳ್ಳಲಿವೆ. ಜೆಡಿಎಸ್ ಪಕ್ಷದ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಈ ವಾಹನಗಳು ಸಂಚರಿಸಲಿವೆ. ಅರ್ಧ ಚುನಾವಣೆ ಹದಿನೇಳನೇ ತಾರೀಕೇ ಮುಗಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ, ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಸಮಾವೇಶಗಳ ಬಗ್ಗೆ ವ್ಯಂಗ್ಯ ಮಾಡಿದ ಕುಮಾರಸ್ವಾಮಿ, ಇಬ್ಬರೂ ನಾಯಕರಿಗೆ ದೊರೆತ ಬೆಂಬಲ ಎಷ್ಟು ಅಂತ ಅರಿತಿದ್ದೇನೆ. ಲಕ್ಷ ಲಕ್ಷ ಜನ ಸೇರಿದ್ದರು ಎಂದು ಹೇಳುತ್ತಿದ್ದಾರೆ. ಅವನ್ನೆಲ್ಲ ಗಮನಿಸಿದ್ದೇನೆ. ಫೆ.17ರಂದು ಯಲಹಂಕದಲ್ಲಿ ನಡೆಸಲು ಉದ್ದೇಶಿಸಿರುವ ಜೆಡಿಎಸ್ ಸಮಾವೇಶದಲ್ಲಿ ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಹೇಳಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.