ಮುಂಬೈ 26/11 ದಾಳಿ ರೂವಾರಿ ಹಫೀಜ್ ಸಯೀದ್ ‘ಉಗ್ರ’ನೆಂದು ಘೋಷಿಸಿದ ಪಾಕಿಸ್ತಾನ

International, Kannada News No Comments on ಮುಂಬೈ 26/11 ದಾಳಿ ರೂವಾರಿ ಹಫೀಜ್ ಸಯೀದ್ ‘ಉಗ್ರ’ನೆಂದು ಘೋಷಿಸಿದ ಪಾಕಿಸ್ತಾನ 14

ನವದೆಹಲಿ: ಮುಂಬೈ 26/11 ದಾಳಿ ರೂವಾರಿ ಹಾಗೂ ಜಮಾತುದ್ದಾವ ಸಂಘಟನೆ ಮುಖ್ಯಸ್ಥ ಹಾಫಿಝ ಸಯೀದ್’ನನ್ನು ಪಾಕಿಸ್ತಾನವು ಉಗ್ರನೆಂದು ಘೋಷಿಸಿದೆ.

ಇಂದು ಪಾಕಿಸ್ತಾನದ ರಾಷ್ಟ್ರಪತಿ ಮಮ್​ನೂನ್ ಹುಸೈನ್ ‘ಭಯೋತ್ಪಾದನಾ ನಿಗ್ರಹ ಕಾಯ್ದೆ’ಗೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕಿದ್ದಾರೆ. ಇದರ ಅನ್ವಯ ಪಾಕ್ ಸರ್ಕಾರ ಇದೀಗ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ನಿಷೇಧಿಸಿರುವ ಎಲ್ಲಾ ಭಯೋತ್ಪಾದಕ ಸಂಘಟನೆ ಹಾಗೂ ಅವುಗಳಿಗೆ ಸಂಬಂಧಿಸಿದ ವ್ಯಕ್ತಿ ಹಾಗೂ ದಾಖಲೆಗಳಿಗೆ ಕಡಿವಾಣ ಹಾಕಬೇಕಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ನಿಷೇಧಿಸಿರುವ, ಲಷ್ಕರೆ ತೈಬಾ, ಜಮಾತುದ್ದಾವಾ , ಹರ್ಕತುಲ್ ಮುಜಾಹೀದೀನ್’ಗಳಂಥ ಸಂಘಟನೆಗಳನ್ನು ‘ಭಯೋತ್ಪಾದನೆ-ವಿರೋಧಿ ಕಾಯ್ದೆ-1997’ರ ವ್ಯಾಪ್ತಿಯಲ್ಲಿ ತರುವ  ಆಧ್ಯಾದೇಶಕ್ಕೆ ಮಂಗಳವಾರ ಪಾಕಿಸ್ತಾನ ಅಧ್ಯಕ್ಷ ಮಮ್ನೂನ್ ಹುಸೇನ್ ಅಂಕಿತ ಹಾಕಿದ್ದಾರೆ.

ಪಾಕಿಸ್ತಾನದ ಸುಪ್ರೀಂ ಕೋರ್ಟ್​ ನೀಡಿರುವ ಆದೇಶದನ್ವಯ ಪಂಜಾಬ್ ಪೊಲೀಸರು ಭಯೋತ್ಪಾದಕ ಹಫೀಜ್ ಸಯೀದ್​ ನೇತೃತ್ವದ ‘ಜಮಾತ್-ಉದ್-ದಾವಾ’ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಸಮಘಟನೆಯ ಪ್ರಧಾನ ಕಚೇರಿಯ ಹೊರಗೆ ಒಂದು ದಶಕದ ಹಿಂದಿನಿಂದಲೂ ಭದ್ರತೆಗೆಂದು ಇರಿಸಲಾಗಿದ್ದ ಬ್ಯಾರಿಕೇಡ್​ಗಳನ್ನು ತೆರವುಗೊಳಿಸಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.