ಕ್ಯಾನ್ಸರ್ ಪೀಡಿತ ಅಭಿಮಾನಿಯ ಸಾವಿಗೆ ಕಂಬನಿ ಮಿಡಿದ ಕಿಚ್ಚಾ ಸುದೀಪ್

Entertainment, Kannada News, Top News No Comments on ಕ್ಯಾನ್ಸರ್ ಪೀಡಿತ ಅಭಿಮಾನಿಯ ಸಾವಿಗೆ ಕಂಬನಿ ಮಿಡಿದ ಕಿಚ್ಚಾ ಸುದೀಪ್ 11

ಸಿನೆಮಾ: ಕಳೆದ ವಾರವಷ್ಟೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಾವಿನಂಚಿನಲ್ಲಿರುವ ಅಭಿಮಾನಿಗೆ ವೀಡಿಯೋ ಕಾಲ್ ಮಾಡಿ ಅಭಿಮಾನಿಯ ಆಸೆ ಈಡೇರಿಸಿದ್ದಾರು. ಈ ಮೂಲಕ ದರ್ಶನ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಇದಾದ ಕೆಲದಿನಗಲ್ಲಿ ಆ ಅಭಿಮಾನಿ ಚಿಕತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ಸ್ಟಾರ್ ನಟರ ಅಭಿಮಾನಿ ಒಬ್ಬರು ಇನ್ನಿಲ್ಲವಾಗಿದ್ದಾರೆ.

ಆ ಅಭಿಮಾನಿಯೇ ವಿನುತಾ. ಕಿಚ್ಚ ಸುದೀಪ್ ಅವರ ಪಕ್ಕಾ ಅಭಿಮಾನಿ. ಕುಶಾಲ ನಗರದ ನಿವಾಸಿ ಆಗಿದ್ದ ಈಕೆ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲೇ ಸುದೀಪ್ ಅವರನ್ನ ಭೇಟಿ ಆಗಬೇಕೆಂಬ ಆಸೆಯನ್ನ ವ್ಯಕ್ತ ಪಡಿಸಿದ್ದರು. ಕ್ಯಾನ್ಸರ್ ಗೆ ತುತ್ತಾಗಿದ್ದ ತಮ್ಮ ಅಭಿಮಾನಿಯನ್ನ ಇತ್ತಿಚಿಗಷ್ಟೇ ಮನೆಗೆ ಕರೆಸಿಕೊಂಡು ಮಾತನಾಡಿಸಿದ್ದರು. ಜೊತೆಯಲ್ಲಿ ಪೋಟೋ ತೆಗೆಸಿಕೊಂಡು ಒಳ್ಳೆ ಚಿಕಿತ್ಸೆ ಪಡೆಯುವಂತೆ ತಿಳಿಸಿದ್ದರು.

ಆದರೆ ಎಷ್ಟೇ ಪ್ರಯತ್ನ ಪಟ್ಟರು ಚಿಕಿತ್ಸೆ ಫಲಕಾರಿ ಆಗದೆ ಇತ್ತಿಚಿಗಷ್ಟೇ ವಿನುತ ಪ್ರಾಣ ಬಿಟ್ಟಿದ್ದಾರೆ. ನೆಚ್ಚಿನ ಅಭಿಮಾನಿಯನ್ನ ಕಳೆದುಕೊಂಡ ಸುದೀಪ್, ವಿನುತಾ ಅವರನ್ನು ನೆನೆಸಿಕೊಂಡು ಮರುಗಿದ್ದಾರೆ. ತಮ್ಮ ಟ್ವಿಟ್ಟರ್ ನಲ್ಲಿ ನೋವನ್ನು ಹಂಚಿಕೊಂಡಿದ್ದಾರೆ. ‘ತುಂಬಾ ನೋವಿನ ವಿಚಾರ ತನ್ನ ತಂಗಿ ವಿನುತಾ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಜೊತೆಗಿನ ಈ ಫೋಟೋವನ್ನ ಜೋಪಾನವಾಗಿ ನಿಧಿಯಂತೆ ಕಾಪಾಡಿಕೊಳ್ಳುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.