ಮುಂದಿನ ಚುನಾವಣೆಯಲ್ಲಿ ಜಿಟಿಡಿ’ಯವರನ್ನು ಬೆಂಬಲಿಸುವಂತೆ ಹೆಚ್.ವಿಶ್ವನಾಥ್ ಮನವಿ

Kannada News, Regional No Comments on ಮುಂದಿನ ಚುನಾವಣೆಯಲ್ಲಿ ಜಿಟಿಡಿ’ಯವರನ್ನು ಬೆಂಬಲಿಸುವಂತೆ ಹೆಚ್.ವಿಶ್ವನಾಥ್ ಮನವಿ 20

ಮೈಸೂರು: ಮುಂದಿನ ಚುನಾವಣೆಯಲ್ಲಿ ಜಿ.ಟಿ ದೇವೇಗೌಡ ಅವರನ್ನು ಬೆಂಬಲಿಸುವಂತೆ ಮಾಜಿ ಸಂಸದ ಹೆಚ್.ವಿಶ್ವನಾಥ್ ಅವರು ಮನವಿ ಮಾಡಿದ್ದಾರೆ.

ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಮೂಗನಹುಂಡಿ ಗ್ರಾಮದಲ್ಲಿ ನಡೆದ ಸ್ನೇಹ ಜೀವಿ ಗೆಳೆಯರ ಬಳಗವನ್ನು ಉದ್ಘಾಟಿಸಿ ಮಾತನಾಡಿದ ಅವರು ನನ್ನನ್ನು ಹುಣಸೂರಿನಲ್ಲಿ ಒಕ್ಕಲಿಗರು ಬೆಂಬಲಿಸುತ್ತಿದ್ದಾರೆ ಅದೇ ರೀತಿ ನೀವು ಚಾಮುಂಡೇಶ್ವರಿ ಯಲ್ಲಿ ಜಿಟಿಡಿಯವರನ್ನು ಬೆಂಬಲಿಸುವಂತೆ ಕೋರಿಕೊಂಡರು.

ಇನ್ನು ಶಾಸಕ ಜಿ.ಟಿ ದೇವೇಗೌಡ ಅವರು ಮಾತನಾಡಿ ಯುವಕ ಸಂಘದ ಮುಖೇನ ಸಮಾಜ ಮುಖಿ ಕಾರ್ಯಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು. ಯುವಕರ ಸಂಘವು ಆರ್ದಶವಾಗಿರ ಬೇಕಾಗುತ್ತದೆ. ಗ್ರಾಮದ ನೈರ್ಮಲ್ಯ ಕಾಪಾಡುವ, ಗಿಡಗಳನ್ನು ಬೆಳೆಸುವುದು, ಕ್ರೀಡೆಗೆ ಒತ್ತು ನೀಡಬೇಕು ಎಂದರು.

ಜೆಡಿಎಸ್ ಯುವ ಮುಖಂಡರಾದ ಜಿ.ಡಿ ಹರೀಶ್ ಗೌಡ ಅವರು ಮಾತನಾಡಿ ಯುವಕರ ಸಂಘದ ಸದಸ್ಯರು ಗ್ರಾಮದಲ್ಲಿ ಸಂಘದ‌ ಮುಖೇನ ಸರ್ಕಾರದ ಸವಲತ್ತುಗಳಾದ ವಿಧವ ವೇತನ, ಅಂಗವಿಕಲ ವೇತನ ಮಾಡಿಸುವುದು ಹಾಗೂ ಗ್ರಾಮದ ನಿವಾಸಿಗಳಿಗೆ ಅನುಕೂಲವಾಗುವಂತೆ ವರ್ಷಕ್ಕೆ ಎರಡು ಉಚಿತ ಆರೋಗ್ಯ ತಪಾಸಣೆಯಂತಹ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಕೋರಿದರು. ಅಲ್ಲದೆ ನಾನು ಯಾವಾಗಲು ನಿಮ್ಮೊಡನೆ ಇರುವುದಾಗಿ ಭರವಸೆ ನೀಡಿದರು.

ಸಮಾರಂಭದಲ್ಲಿ ಜಿ.ಪಂ. ಸದಸ್ಯರಾದ ಬೀರಿಹುಂಡಿ ಬಸವಣ್ಣ, ಎಸ್. ಮಾದೇಗೌಡ, ಎ.ಪಿ.ಎಂ.ಸಿ.ಸದಸ್ಯರಾದ ಕೋಟೆಹುಂಡಿ ಮಹದೇವು, ತಾ.ಪಂ.ಸದಸ್ಯರಾದ ಸಾಕಮ್ಮ ಸುಗ್ರೀವ, ರಮೇಶ ಕಲ್ಲಿಪಾಳ್ಯ, ಶಿವಪ್ಪ ಕೇರ್ಗಳ್ಳಿ, ಬೊಜರಾಜು, ರಾಜು ಹಾಗೂ ಹಲವಾರು ಮುಖಂಡರು ಭಾಗವಹಿಸಿದ್ದರು

Related Articles

Leave a comment

Back to Top

© 2015 - 2017. All Rights Reserved.