ಆಫ್ರಿಕಾ ನೆಲದಲ್ಲಿ ಇತಿಹಾಸ ಸೃಷ್ಟಿ: ಟೀಂ ಇಂಡಿಯಾಕ್ಕೆ ಸರಣಿ ಜಯ

Kannada News, Sports, Top News No Comments on ಆಫ್ರಿಕಾ ನೆಲದಲ್ಲಿ ಇತಿಹಾಸ ಸೃಷ್ಟಿ: ಟೀಂ ಇಂಡಿಯಾಕ್ಕೆ ಸರಣಿ ಜಯ 16

ಪೋರ್ಟ್’ಎಲಿಜಬೆತ್: ಆಫ್ರಿಕಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ 5ನೇ ಪಂದ್ಯದಲ್ಲಿ ಟೀಂ ಇಂಡಿಯಾ 73 ರನ್’ಗಳ ಅಂತರದಿಂದ ಗೆದ್ದುಕೊಂಡಿದ. ಈ ಮೂಲಕ ಇನ್ನೂ ಒಂದು ಪಂದ್ಯ ಬಾಕಿಯಿರುವಂತೆ 4-1 ಅಂತರದಿಂದ ಏಕದಿನ ಸರಣಿ ಗೆದ್ದು ಹೊಸ ಇತಿಹಾಸ ನಿರ್ಮಿಸಿದೆ.

ಭಾರತ ನೀಡಿದ್ದ 275 ರನ್’ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ 42.2 ಓವರ್’ಗಳಲ್ಲಿ 201 ರನ್’ಗಳಿಗೆ ಆಲೌಟ್ ಆಯಿತು. ಭಾರತದ ಸ್ಪಿನ್ನರ್’ಗಳಾದ ಕುಲ್ದೀಪ್ ಯಾದವ್ ಮತ್ತು ಯಜುವೇಂದ್ರ ಚಹಾಲ್ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಪಡೆಯನ್ನು ಇಲ್ಲೂ ದೂಳಿಪಟ ಮಾಡಿದರು. ಕುಲ್ದೀಪ್ 57/4 ಮತ್ತು ಚಹಾಲ್ 43/2 ವಿಕೆಟ್ ಉರುಳಿಸಿ ಮಿಂಚಿದರು. ಆಂತಿಮವಾಗಿ ಭಾರತದ ಸ್ಪಿನ್ ದಾಳಿಗೆ ತತ್ತರಿಸಿ ಆಫ್ರಿಕಾ 201 ರನ್’ಗೆ ಆಲೌಟ್ ಆಯಿತು.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ರೋಹಿತ್ ಶರ್ಮಾ ಅವರ 115 ರನ್’ಗಳ ನೆರವಿನಿಂದ 274 ರನ್ ಕಲೆಹಾಕಿತ್ತು. ಶತಕ ಸಿಡಿಸಿದ ರೋಹಿತ್ ಶರ್ಮಾ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಆಫ್ರಿಕಾ ನೆಲದಲ್ಲಿ ಏಕದಿನದಲ್ಲಿ ಭಾರತದ ಸಾಧನೆಗಳು:

1992: ಸೋಲು 2-5
2006: ಸೋಲು 0-4
2011: ಸೋಲು 2-3
2013: ಸೋಲು 0-2
2018: ಮುನ್ನಡೆ/ಗೆಲುವು 4-1 (ಇನ್ನು ಒಂದು ಪಂದ್ಯ ಬಾಕಿ ಉಳಿದಿದೆ)

Related Articles

Leave a comment

Back to Top

© 2015 - 2017. All Rights Reserved.