ಟಿಪ್ಪು ಜಯಂತಿ ಆಯ್ತು ಇದೀಗ ಬಹುಮನಿ ಉತ್ಸವಕ್ಕೆ ವಿರೋಧ: ಮಾಡೇ ತೀರುವ ಉತ್ಸಾಹದಲ್ಲಿ ಕೈ ಪಡೆ

BREAKING NEWS, Kannada News, Regional, Top News No Comments on ಟಿಪ್ಪು ಜಯಂತಿ ಆಯ್ತು ಇದೀಗ ಬಹುಮನಿ ಉತ್ಸವಕ್ಕೆ ವಿರೋಧ: ಮಾಡೇ ತೀರುವ ಉತ್ಸಾಹದಲ್ಲಿ ಕೈ ಪಡೆ 8

ಕಲಬುರಗಿ: ಸೂಫಿ ಸಂತರ ನಾಡು ಎಂದೇ ಖ್ಯಾತಿಯಾಗಿರುವ ಕಲ್ಬುರ್ಗಿ ಜಿಲ್ಲೆಯಲ್ಲಿ ಬಹುಮನಿ ಉತ್ಸವಕ್ಕೆ ಸರ್ಕಾರ ಸಿದ್ಧತೆ ನಡೆಸಿದೆ.

ಮಾರ್ಚ್ 6ರಂದು ನಗರದ ಬಹುಮನಿ ಕೋಟೆ ಮತ್ತು ಹಫ್ತ್ ಗುಮ್ಮಜ್ ಬಳಿ ಉತ್ಸವ ನಡೆಯುತಿದ್ದು ಇದಕ್ಕೆ ಬಿಜೆಪಿ ಮತ್ತು ಕೆಲ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಹೌದು ಬಹುಮನಿ ಸುಲ್ತಾನರು ವಚನ ಸಾಹಿತ್ಯ, ದಾಸ ಸಾಹಿತ್ಯ, ಸೂಫಿಸಂತರ ಸಾಹಿತ್ಯದ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ ಹೀಗಾಗಿ ಯಾವುದೇ ಕಾರಣಕ್ಕೂ ಬಹುಮನಿ ಉತ್ಸವ ನಡೆಸಬಾರದು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.

ಶತಾಯಗತಾಯ ಬಹುಮನಿ ಹೆಸರಿನಲ್ಲಿಯೆ ಉತ್ಸವ ಮಾಡಲು ಕೈ ನಾಯಕರು ನಿರ್ಧರಿಸಿದ್ದು, ಮಾರ್ಚ್ 6ರಂದು ಖವಾಲಿ ಸೇರಿದಂತೆ ಬಹುಮನಿ ಸುಲ್ತಾನರ ಸಂಸ್ಕೃತಿ ಅನಾವರಣಕ್ಕೆ ಸಜ್ಜಾಗಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.