ಮೈಸೂರು ವಾಹನ ಸವಾರಿಗೊಂದು ಸಿಹಿ ಸುದ್ದಿ: ಇನ್ನು ಮುಂದೆ ಕಾಗದದ ದಾಖಲಾತಿ ತೋರಿಸುವ ಅವಶ್ಯಕತೆ ಇಲ್ಲ..!

BREAKING NEWS, Kannada News, Regional, Top News No Comments on ಮೈಸೂರು ವಾಹನ ಸವಾರಿಗೊಂದು ಸಿಹಿ ಸುದ್ದಿ: ಇನ್ನು ಮುಂದೆ ಕಾಗದದ ದಾಖಲಾತಿ ತೋರಿಸುವ ಅವಶ್ಯಕತೆ ಇಲ್ಲ..! 45

ಮೈಸೂರು: ವಾಹನ ಸವಾರರಿಗೊಂದು ಸಿಹಿ ಸುದ್ದಿ. ಇನ್ನೂ ಮುಂದೆ ಪೋಲೀಸರ ತಪಾಸಣೆ ವೇಳೆ ಕಾಗದದ ರೂಪದ ದಾಖಲಾತಿ ತೋರಿಸುವ ಅವಶ್ಯಕತೆ ಇಲ್ಲ. ಇನ್ನುಮುಂದೆ ಮೊಬೈಲ್ ನಲ್ಲಿಯೇ ದಾಖಲಾತಿಗಳನ್ನು ತೋರಿಸಬಹುದಾಗಿದ್ದು, ಸಂಚಾರಿ ಪೊಲೀಸರು ಇದನ್ನು ಮಾನ್ಯ ಮಾಡಲಿದ್ದಾರೆ.

ಹೌದು. ಡಿಜಿಟಲ್ ದಾಖಲಾತಿಯಲ್ಲಿ ಸಂಚಾರಿ ಪೊಲೀಸರು ಮಹತ್ವದ ಹೆಜ್ಜೆ ಇಟ್ಟಿದ್ದು ವಾಹನ ದಾಖಲಾತಿಗಳನ್ನು ಮೊಬೈಲ್ ನಲ್ಲಿಯೇ ತೋರಿಸಬಹುದಾದ ಯೋಜನೆಯನ್ನು ಜಾರಿಗೊಳಿಸಿದೆ. ಡಿಜಿ ಲಾಕರ್ ಮೂಲಕ ವಾಹನ ದಾಖಲೆಗಳನ್ನು ಡಿಜಿಟಲ್ ದಾಖಲೆಗಳನ್ನು ಶೇಖರಿಸಿಕೊಂಡು ಅಗತ್ಯ ಸಂದರ್ಭದಲ್ಲಿ ತೋರಿಸುವ ಅವಕಾಶ ಒದಗಿಸಲಾಗಿದೆ. ಅಲ್ಲದೆ ಇದನ್ನು ಪೊಲೀಸರು ಮಾನ್ಯ ಮಾಡಲಿದ್ದಾರೆ.

ಸವಾರರು ಕಾಗದ ರೂಪದಲ್ಲಿದ್ದ ಎಲ್ಲಾ ದಾಖಲತಿಗಳನ್ನು ಇಟ್ಟುಕೊಳ್ಳಲು ಸಮಸ್ಯೆಯುಂಟಾಗುತ್ತಿದ್ದ ಹಿನ್ನಲೆ, ಈ ಯೋಜನೆ ಮೂಲಕ ಸಮಸ್ಯೆ ದೂರವಾಗಲಿದೆ. ಈ ಬಗ್ಗೆ ಪೊಲೀಸ್ ಆಯುಕ್ತ ಡಾ. ಎ.ಎಸ್ ಸುಭ್ರಹ್ಮಣ್ಯೇಶ್ವರ ರಾವ್ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದರೆ ಕ್ರಿಮಿನಲ್ ಹಾಗೂ ವಾಹನ ಅಪಘಾತ ಸಂದರ್ಭದಲ್ಲಿ ಮೂಲ ದಾಖಲೆಗಳನ್ನು ತೋರಿಸುವುದು ಕಡ್ಡಾಯವಾಗಿದೆ.

Related Articles

Leave a comment

Back to Top

© 2015 - 2017. All Rights Reserved.