ಸ್ಟೇಟಸ್ ಸುಂದ್ರಿ ವಿರುದ್ಧ ದೂರು ದಾಖಲು: ಕಾರಣವೇನು ಗೊತ್ತಾ..!

BREAKING NEWS, Entertainment, Kannada News, Top News No Comments on ಸ್ಟೇಟಸ್ ಸುಂದ್ರಿ ವಿರುದ್ಧ ದೂರು ದಾಖಲು: ಕಾರಣವೇನು ಗೊತ್ತಾ..! 38

ಸಿನಿಮಾ: ವೈರಲ್ ಸ್ಟಾರ್ ಪ್ರಿಯಾ ಪ್ರಕಾಶ್ ವಾರಿಯರ್ ವಿರುದ್ಧ ದೂರು ದಾಖಲಾಗಿದೆ. ತನ್ನ ಕಣ್ ಸನ್ನೆಗಳಿಂದಲೇ ಮೋಡಿ ಮಾಡಿದಾಕೆಯ ಕಣ್ ಸನ್ನೆಯ ಮೇಲೆಯೇ ದೂರು ದಾಖಲಾಗಿದೆ ಎಂದು ಹೇಳಲಾಗಿದೆ.

ಹೌದು. ಹಾಡಿನಲ್ಲಿ ಮುಸ್ಲಿಂ ಭಾವನೆಗಳಿಗೆ ದಕ್ಕೆ ತಂದ ಆರೋಪದ ಮೇಲೆ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ವಿರುದ್ಧ ದೂರು ದಾಖಲಾಗಿದ್ದು, ಯೂತ್ ಮುಸ್ಲಿಂ ವತಿಯಿಂದ ಹೈದರಾಬಾದ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಮಲಯಾಳಂ “ಒರು ಆಡಾರ್ ಲವ್” ಚಿತ್ರದ “ಮಾಣಿಕ್ಯ ಮಲತಾಯಿ ಪೂವಿ” ಹಾಡಿನಲ್ಲಿ ಪ್ರಿಯಾ ಕೊಡುವ ಮುಖಭಾವನೆ ಮೇಲೆ ದೂರು ದಾಖಲಾಗಿದೆ.

ಒಟ್ಟಿನಲ್ಲಿ ಕಣ್ಣುಕುಕ್ಕುವ ನೋಟದಿಂದಲೇ ಸ್ಟಾರ್ ಪಟ್ಟ ಗಿಟ್ಟಿಸಿಕೊಮನಡಿರುವ ಹಾಗೂ, ಚಿತ್ರ ರಿಲೀಸ್ ಗೂ ಮುನ್ನ ಟೀಸರ್ ನಿಂದಲೇ ಫೇಮಸ್ ಆಗಿರುವ ನಟಿ ಪ್ರಿಯಾ ಅವರ ಸುದ್ದಿ ದಿನದಿಂದ ದಿನಕ್ಕೆ ಭಾರಿ ಸದ್ದು ಮಾಡುತ್ತಿವೆ.

Related Articles

Leave a comment

Back to Top

© 2015 - 2017. All Rights Reserved.