ಸ್ಕೂಲ್ ಬಸ್ – ಬೈಕ್ ನಡುವೆ ಡಿಕ್ಕಿ: ಬೈಕ್ ಸವಾರ ಸಾವು

Crime, Kannada News, Regional No Comments on ಸ್ಕೂಲ್ ಬಸ್ – ಬೈಕ್ ನಡುವೆ ಡಿಕ್ಕಿ: ಬೈಕ್ ಸವಾರ ಸಾವು 11

ಮೈಸೂರು: ಸ್ಕೂಲ್ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಗಿರಿಯಾಬೋವಿ ಪಾಳ್ಯದ ಗೇಟ್ ಬಳಿ ಈ ಘಟನೆ ನಡೆದಿದ ನಿತಿನ್ (15) ಮೃತಪಟ್ಟ ಯುವಕ. ನಿತಿನ್ ರಾಘವೇಂದ್ರ ನಗರದ ನಿವಾಸಿಯಾಗಿದ್ದು, ವಿದ್ಯಾವಿಕಾಸ ಶಾಲೆಯ 10 ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ.

ಈ ನಡುವೆ ಟ್ಯೂಷನ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಜ್ಞಾನ ಸರೋವರ ಶಾಲೆಗೆ ಸೇರಿದ ಬಸ್ ನಿತಿನ್ ಬೈಕ್ ಗೆ ಡಿಕ್ಕಿಯಾಗಿದೆ. ನಿತಿನ್ ಹೆಲ್ಮೆಟ್ ಧರಿಸದೆ ಬೈಕ್ ಓಡಿಸುತ್ತಿದ್ದನು. ಹೀಗಾಗಿ ಅಪಘಾತದಲ್ಲಿ ತಲೆಗೆ ಗಂಭೀರ ಪೆಟ್ಟು ಬಿದ್ದ ಕಾರಣ ನಿತಿನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಸಿದ್ದಾರ್ಥ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.