ಸಂಬಂಧಪಡದವರಿಂದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ: ಕೆ.ಡಿ.ಪಿ ಸಭೆಯಲ್ಲಿ ಅಧಿಕಾರಿಗಳಿಗೆ ತರಾಟೆ

BREAKING NEWS, Kannada News, Regional, Top News No Comments on ಸಂಬಂಧಪಡದವರಿಂದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ: ಕೆ.ಡಿ.ಪಿ ಸಭೆಯಲ್ಲಿ ಅಧಿಕಾರಿಗಳಿಗೆ ತರಾಟೆ 54

ಮೈಸೂರು: ಇಂದು ಶಾಸಕ ಜಿ.ಟಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ ಸಭೆ ಜರುಗಿತು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲಾಯ್ತು.

ಈ ವೇಳೆ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳು, ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಲಾಯ್ತು. ಮುಖ್ಯವಾಗಿ ಚಾಮುಂಡೇಶ್ವರಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಸಂಬಂಧ ಪಡದವರು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೋಡುತ್ತಿದ್ದಾರೆ. ಇದು ಹೇಗೆ ಸಾಧ್ಯ, ಚುನಾವಣೆಯಲ್ಲಿ ಗೆದ್ದ ಜನಪ್ರತಿನಿಧಿಗಳಿಗೆ ಬೆಲೆ ಇಲ್ಲವೇ. ಅವರಿಗೆ ಚಾಲನೆ ನೀಡಲು ಅಧಿಕಾರ ಕೊಟ್ಟವರು ಯಾರು ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಳ್ಳಲಾಯಿತು.

ಈ ವೇಳೆ ಜಿಟಿಡಿ ಅವರು ಮಾತನಾಡಿ ಇಂದು ಹಲವೆಡೆ ನೀರಿನ ಸಮಸ್ಯೆ ಎದುರಾಗಿದೆ, ಹಲವಾರು ಶಾಲೆಗಳು ದುಸ್ಥಿತಿಯಲ್ಲಿದೆ, ಇಲ್ಲಿ ಕುಡಿಯುವ ನೀರಿಲ್ಲ, ಶೌಚಾಲಯಗಳಿಲ್ಲ ಮೂಲಭೂತ ಸಮಸ್ಯೆಗಳಿವೆ ಇಂತಹ ಶಾಲೆಗಳು ಎಷ್ಟಿವೆ, ನೀವೆಲ್ಲಾ ಏನು ಕೆಲಸ ಮಾಡುತ್ತಿದ್ದೀರ ಎಂದು ಅಧಿಕಾರಿಗಳನ್ನ ತರಾಟೆಗೆ ತೆಗದುಕೊಂಡರು.

ನಮ್ಮ ಗ್ರಾಮಪಂಚಾಯಿತಿಗಳು ಸಮರ್ಪಕವಾಗಿವೆ ಆರ್ಥಿಕವಾಗಿ ಹಿಂದುಳಿದ ಪಂಚಾಯಿತಿಗಳು ಕಡಿಮೆ. ಅದರೆ ನೀವುಗಳು ಏಕೆ ಅತ್ತ ಗಮನಹರಿಸುತ್ತಿಲ್ಲ..? ಪಂಚಾಯತ್ ಡೆವಲಪ್‌ಮೆಂಟ ಆಫಿಸರ್ ಹಾಗಿ ಕೆಲಸ ಮಾಡುತ್ತಿಲ್ಲವೇಕೆ.

ಇಂದು ಬೇರೆ ಕ್ಷೇತ್ರದಲ್ಲಿ ಶಾಸಕರುಗಳು ಹಕ್ಕುಪತ್ರಗಳನ್ನು ವಿತರಣೆ ಮಾಡುತ್ತಿದ್ದಾರೆ. ಆದರೆ ನನ್ನ ಕ್ಷೇತ್ರದಲ್ಲಿ ಕರೆದರೂ ನಾನೂ ನಿಮ್ಮ ಕರ್ತವ್ಯವನ್ನು ನೀವು ಮಾಡಿ. ಮೊದಲು MLAಗಳಿಗೆ ಅಧಿಕಾರವಿತ್ತು. ಆದರೆ ಈಗ ಪಂಚಾಯಿತಿಗಳಿಗೆ ಪೂರ್ಣ ಅಧಿಕಾರ ಕೊಟ್ಟಿದ್ದೇವೆ. ಚುನಾವಣೆ ಹತ್ತಿರ ಬರುತ್ತಿದೆ ಬಹಳಷ್ಟು ಜವಾಬ್ದಾರಿಗಳು ನಿಮ್ಮ ಮೇಲಿರಲಿದೆ ಇದರ ಜಿತೆಗೆ ಬೇಸಿಗೆ ಹತ್ತಿರವಾಗುತ್ತಿದೆ ನೀರಿನ ಸಮಸ್ಯೆ ಉಂಟಾಗಬಹುದು, ಇದಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಇನ್ನು ಮುಖ್ಯವಾಗಿ ಚುನಾವಣೆ ಹತ್ತಿರವಾಗುತ್ತಿದ್ದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು ನಿಮಗೆ ಮಾರ್ಗದರ್ಶನ ಮಾಡುತ್ತಿದ್ದಾರೆ ಹಾಗೂ ಪರೀಕ್ಷಿಸುತ್ತಿದ್ದಾರೆ ಇದೆಲ್ಲ ನಿಮ್ಮ ಗಮನದಲ್ಲಿರಬೇಕು. ಸಂಬಂಧ ಪಡದವರು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಿದ್ದಾರೆ. ನಾನು ಕಾನೂನು ವಿರುದ್ಧ ಕೆಲಸ ಮಾಡಲ್ಲ. ನೀವು ಜವಾಬ್ದಾರಿಯುತ ಕೆಲಸವನ್ನು ಮಾಡಬೇಕು, ಈ ರೀತಿ ಕೆಲಸ ಮಾಡಲು ಒತ್ತಡ ಬಂದರೆ ಕಠಿಣವಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಬೀರುಹುಂಡಿ ಬಸವಣ್ಣ, ಮಾದೇಗೌಡ, ಕಾಳಮ್ಮ ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು ಸದಸ್ಯರುಗಳು, ಪಿಡಿಓ ಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Related Articles

Leave a comment

Back to Top

© 2015 - 2017. All Rights Reserved.