ಬಿಜೆಪಿ ಮತದಾರರನ್ನು ಮತದಾರ ಪಟ್ಟಿಯಿಂದ ತೆಗೆಯಲಾಗುತ್ತಿದೆ: ರಾಮದಾಸ್ ಆರೋಪ

Kannada News, Regional No Comments on ಬಿಜೆಪಿ ಮತದಾರರನ್ನು ಮತದಾರ ಪಟ್ಟಿಯಿಂದ ತೆಗೆಯಲಾಗುತ್ತಿದೆ: ರಾಮದಾಸ್ ಆರೋಪ 9

ಮೈಸೂರು: ಮೈಸೂರಿನ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗುತ್ತಿದೆ ಎಂದು ಮಾಜಿ ಸಚಿವ ಎಸ್ ಎ ರಾಮದಾಸ್ ಆರೋಪ ಮಾಡಿದ್ದಾರೆ.

ಕುವೆಂಪು ನಗರದಲ್ಲಿರುವ ಜ್ಯೋತಿ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ದೀಢೀರ್ ಭೇಟಿ ನೀಡಿ ಮತದಾರರ ಪರಿಸ್ಕರಣಾ ಕಡತ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ವಿಧಾನ ಸಭಾ ಹಾಗೂ ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಮತ ಬಂದಿದ್ದ ಬೂತ್ ಗಳಲ್ಲಿ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗುತ್ತಿದೆ. ಈಗಾಗಲೇ 11 ಸಾವಿರಕ್ಕೂ ಹೆಚ್ಚು ನಕಲಿ ಅರ್ಜಿಗಳ ಮುಖಾಂತರ ಬಿಜೆಪಿ ಮತದಾರರನ್ನು ತೆಗೆದು ಹಾಕಿದ ವಿರುದ್ಧ ಈಗಾಗಲೇ ಕುವೆಂಪು ನಗರ, ವಿದ್ಯಾರಣ್ಯ, ಜೆ.ಪಿ.ನಗರ ಠಾಣೆಗಳಲ್ಲಿ ದೂರು ದಾಖಲಾಗಿದ್ದರು ಶಿಸ್ತು ಕ್ರಮ ಕೈಗೊಳ್ಳದ ಹಿನ್ನಲೆ ಕೇಂದ್ರ ಚುನಾವಣೆ ಆಯೋಗಕ್ಕೇ ಮುಂದಿನ ದಿನಗಳಲ್ಲಿ ದೂರು ನೀಡಿಲಾಗುವುದು.

ಒಬ್ಬನೇ ವ್ಯಕ್ತಿ BLO ಗಳ ನಕಲು ಸಹಿ ಹಾಕಿ ಫೇಕ್ ಅರ್ಜಿ ಸೃಷ್ಠಿಸಿದ್ದಾನೆ. ಸತ್ತವರನ್ನೂ ಕೂಡ ಬದುಕಿದ್ದಾರೆ ಎಂದು ಅರ್ಜಿ ಸಲ್ಲಿಸಿದ್ದಾರೆ. BLO ಗಳ ಅಧಿಕಾರಿಗಳನ್ನು ಕೇಳಿದರೆ ಅವರು ಇದು ನಮ್ಮ ಸಹಿ ಅಲ್ಲ ಎಂದು ಹೇಳ್ತೀದ್ದಾರೆ. ಯಾರು ಈ ಕೆಲಸ ಮಾಡಿದ್ದಾನೋ ಅವನ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬೇಕು. ನಾಳೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಇನ್ನು ಈ ಬಗ್ಗೆ BLO ಅಧಿಕಾರಿ ಪರಮೇಶ್ವರ ಮಾತನಾಡಿ RI ರವರು ನಮ್ಮ ಶಾಲಾ ವ್ಯಾಪ್ತಿಯ ಬೂತ್ ಗಳಿಗೆ ಮತದಾರರ ವಿವಿರಣೆ ಪತ್ರ ತಂದು ಕೊಟ್ರೋ.ಆ ಸಂದರ್ಭದಲ್ಲಿ ನಮ್ಮ ಸಹಿಯ ಜಾಗದಲ್ಲಿ ಬೇರೊಬ್ಬ ಸಹಿ ಇರೋದು ಗೊತ್ತಾಗಿದೆ. ಅಲ್ಲದೇ ವಿವರಣೆ ಪತ್ರದಲ್ಲಿ ಕೆಲವುಂದು ವ್ಯತ್ಯಾಸಗಳು ಕಂಡು ಬಂದಿದೆ. ಈ ವಿಷಯವನ್ನು ಹಿರಿಯ ಅಧಿಕಾರಗಳ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.

Related Articles

Leave a comment

Back to Top

© 2015 - 2017. All Rights Reserved.