ಮೈಸೂರಿಗೆ ಪ್ರಧಾನಿ ಭೇಟಿ ಹಿನ್ನಲೆ: ಕೇಂದ್ರ ತಂಡದಿದಂದ ಸ್ಥಳ ಪರಿಶೀಲನೆ

Kannada News, Regional, Top News No Comments on ಮೈಸೂರಿಗೆ ಪ್ರಧಾನಿ ಭೇಟಿ ಹಿನ್ನಲೆ: ಕೇಂದ್ರ ತಂಡದಿದಂದ ಸ್ಥಳ ಪರಿಶೀಲನೆ 9

ಮೈಸೂರು: ಫೆ. 19 ರಂದು ಮೈಸೂರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭೇಟಿ ನೀಡುವ ಹಿನ್ನಲೆ ಎಸ್.ಪಿ.ಜಿ. ಎಐಜಿಪಿ ಸೋಮಯತಿರಾಯ್ ನೇತೃತ್ವದ ತಂಡ ಮೈಸೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಫೆ.18 ರಂದು ರಾತ್ರಿ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಲಿರುವ ಮೋದಿ ಲಲಿತ್ ಮಹಲ್ ಪ್ಯಾಲೆಸ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಫೆ.19 ಬೆಳಿಗ್ಗೆ 10 :30 ಕ್ಕೆ ವಿಡಿಯೋ ಸಂವಾದ ನಡೆಸಿದ ಬಳಿಕ 12:30 ವಿಶೇಷ ಹೆಲಿಕಾಪ್ಟರ್ ಮೂಲಕ ಶ್ರವಣಬೆಳಗೊಳಕ್ಕೆ ಭೇಟಿ ನೀಡಲಿದ್ದಾರೆ. ನಂತರ ಶ್ರವಣ ಬೆಳಗೋಳದಿಂದ 3 ಗಂಟೆಗೆ ಹೊರಟು ಮೈಸೂರಿನ ಜೆ.ಕೆ.ಮೈದಾನದಲ್ಲಿ ಇಳಿಯಲಿದ್ದಾರೆ.

ಈ ವೇಳೆ ರೈಲ್ವೆ ನಿಲ್ದಾಣದಲ್ಲಿ ಜೋಡಿ ಎಲೆಕ್ಟಿಕಲ್ ಟ್ರೈನ್ ಉದ್ಘಾಟನೆ. ಷಟ್ಪತ ರೈಲು ಮಾರ್ಗ ಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ಮಹಾರಾಜ ಕಾಲೇಜು ಮೈದಾನದಲ್ಲಿ ಬಹಿರಂಗ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ. ನಂತರ ಸಂಜೆ 4:30 ಕ್ಕೆ ವಿಶೇಷ ವಿಮಾನದ ಮೂಲಕ ನರೇಂದ್ರ ಮೋದಿ ಬೆಂಗಳೂರು ತಲುಪಲಿದ್ದಾರೆ.

ಪ್ರಧಾನ ಮಂತ್ರಿಗಳು ಸಂಚರಿಸುವ ಮಾರ್ಗ, ಲಲಿತ್ ಮಹಲ್ ಹೆಲಿಪ್ಯಾಡ್, ಜೆ. ಕೆ ಗ್ರೌಂಡ್, ಹಾಗೂ ಮಹಾರಾಜ ಕಾಲೇಜು ಮೈದಾನದಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್, ಪಾಲಿಕೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸೇರಿ 45 ಅಧಿಕಾರಿಗಳು ಸ್ಥಳ ಪರೀಶಿಲನೆ ನಡೆಸಿದರು.

Related Articles

Leave a comment

Back to Top

© 2015 - 2017. All Rights Reserved.