ತಮ್ಮ ಬೆಳೆ ಮೇಲೆ ಯಾರ ಕಣ್ಣು ಬೀಳಬಾರದೆಂದು ಸನ್ನಿ ಲಿಯೋನ್ ಪೋಸ್ಟರ್ ಹಾಕಿದ್ರು ಈ ರೈತ

Kannada News, National No Comments on ತಮ್ಮ ಬೆಳೆ ಮೇಲೆ ಯಾರ ಕಣ್ಣು ಬೀಳಬಾರದೆಂದು ಸನ್ನಿ ಲಿಯೋನ್ ಪೋಸ್ಟರ್ ಹಾಕಿದ್ರು ಈ ರೈತ 14

ಹೈದರಾಬಾದ್: ತಮ್ಮ ಹೊಲದ ಮೇಲೆ ಯಾರ ಕಣ್ಣು ಬೀಳಬಾರದೆಂದು ರೈತರೊಬ್ಬರು ತನ್ನ ಹೊಲದ ಮೇಲೆ ಸನ್ನಿ ಲಿಯೋನ್ ಪೋಸ್ಟರ್ ಹಾಕಿ ಭಾರಿ ಸುದ್ದಿಯಾಗಿದ್ದಾರೆ.

ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಚೆಂಚಿ ರೆಡ್ಡಿ ಎಂಬ ರೈತರೊಬ್ಬರು ಸನ್ನಿ ಲಿಯೋನ್ ಪೋಸ್ಟರನ್ನು ಹಾಕಿದ್ದಾರೆ. ಸನ್ನಿ ಕೆಂಪು ಬಿಕಿನಿ ಹಾಕಿರುವ ಫೋಟೋವೊಂದಕ್ಕೆ ‘ಹೇ, ನನ್ನನ್ನು ಕಂಡು ಮರುಗಬೇಡ ಹಾಗೂ ಅಳಬೇಡ’ ಎಂದು ತೆಲುಗುವಿನಲ್ಲಿ ಬರೆದು ಪೋಸ್ಟರ್ ಹಾಕಿದ್ದಾರೆ.

ಇನ್ನು ರೈತರು ಇದಕ್ಕೆ ಪ್ರತಿಕ್ರಿಯೆ ನೀಡಿ ನನ್ನ 10 ಎಕರೆ ಜಮೀನಿನಲ್ಲಿ ಈ ವರ್ಷ ಅತ್ಯುತ್ತಮ ಬೆಳೆ ಬೆಳೆದಿದೆ. ಗ್ರಾಮಸ್ಥರು ನನ್ನ ಜಮೀನಿನ ಮೇಲೆ ಕಣ್ಣು ಹಾಕುತ್ತಿದ್ದಾರೆ. ಅವರ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ನಾನು ಸನ್ನಿ ಲಿಯೋನ್ ಪೋಸ್ಟರ್ ಗಳನ್ನು ಹಾಕಲು ನಿರ್ಧರಿಸಿದೆ. ಈಗ ನನ್ನ ಈ ಉಪಾಯ ಯಶಸ್ವಿಯಾಗಿದ್ದು, ನನ್ನ ಜಮೀನಿನ ಮೇಲೆ ಈಗ ಯಾರು ಕಣ್ಣು ಹಾಕುವುದಿಲ್ಲ ಎಂದು ರೈತ ಚೆಂಚಿ ರೆಡ್ಡಿ ತಿಳಿಸಿದ್ದಾರೆ. ಸದ್ಯ ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

Related Articles

Leave a comment

Back to Top

© 2015 - 2017. All Rights Reserved.