ಬಹುಮನಿ ಉತ್ಸವ: ನನಗೇನು ಗೊತ್ತಿಲ್ಲವೆಂದ ಸಿಎಂ..! ಯೂಟರ್ನ್ ಹೊಡೆದ ಸಚಿವ ಶರಣ್ ಪ್ರಕಾಶ್

BREAKING NEWS, Kannada News, Regional, Top News No Comments on ಬಹುಮನಿ ಉತ್ಸವ: ನನಗೇನು ಗೊತ್ತಿಲ್ಲವೆಂದ ಸಿಎಂ..! ಯೂಟರ್ನ್ ಹೊಡೆದ ಸಚಿವ ಶರಣ್ ಪ್ರಕಾಶ್ 21

ಬೆಂಗಳೂರು: ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ನಂತರ ಇದೀಗ ಬಹುಮನಿ ಉತ್ಸವ ಆಚರಣೆ ಕಾವು ಪಡೆದುಕೊಂಡಿದೆ. ಕೈ ನಾಯಕರು ಉತ್ಸವ ಮಾಡೇ ತೀರುತ್ತೇ ಅಂದರೆ. ಬಿಜೆಪಿ ಯವರು ಮಾಡಲು ಬಿಡಲ್ಲ ಅಂತಾರೆ ಆದರೆ. ನಮ್ ಸಿಎಂ ನನಗೇನು ಗೊತ್ತೇ ಇಲ್ಲ ಅಂತಾರೆ..!

ಹೌದು. ಸರ್ಕಾರ ಬಹಮನಿ ಸುಲ್ತಾನರ ಆಚರಣೆಯನ್ನು ಮಾಡುತ್ತಿಲ್ಲ. ಇದ್ಯಾವುದು ನನಗೆ ಗೊತ್ತಿಲ್ಲವೆಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.  ಕಲಬುರಗಿ ಜಿಲ್ಲೆಯಲ್ಲಿ ಬಹುಮನಿ ಉತ್ಸವಕ್ಕೆ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎನ್ನುವ ಸುದ್ದಿಗೆ ಅವರು, ಸರ್ಕಾರದಿಂದ ಯಾವುದೇ ಉತ್ಸವ ಆಚರಣೆ ಮಾಡುತ್ತಿಲ್ಲ ಎಂದು ಪ್ರತಿಕ್ರಿಯಿಸಿದರು. ಈ ವೇಳೆ ಕಲಬುರಗಿ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಬಹಮನಿ ಸುಲ್ತಾನರ ಉತ್ಸವ ಆಚರಣೆ ಕುರಿತು ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ, ನೀವು ಅವರನ್ನೇ ಕೇಳಿ ಎಂದು ಸಿಎಂ ಉತ್ತರಿಸಿದ್ದಾರೆ.

ಬಹಮನಿ ಸುಲ್ತಾನರು ವಚನ ಸಾಹಿತ್ಯ, ದಾಸ ಸಾಹಿತ್ಯ ಮತ್ತು ಸೂಫಿ ಸಂತರ ಸಾಹಿತ್ಯದ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಬಹುಮನಿ ಉತ್ಸವ ನಡೆಸಬಾರದೆಂದು ಬಿಜೆಪಿ ಮತ್ತು ಕೆಲ ಕನ್ನಡಪರ ಸಂಘಟನೆಗಳು, ಮಾರ್ಚ್ 6 ರಂದು ನಗರದ ಬಹುಮನಿ ಕೋಟೆ ಮತ್ತು ಹಫ್ತ್ ಗುಮ್ಮಜ್ ಬಳಿ ಹೋರಾಟ ನಡೆಸಲು ಮುಂದಾಗಿದ್ದಾರೆ.

ಯೂಟರ್ನ್ ಹೊಡೆದ ಸಚಿವ ಶರಣ್ ಪ್ರಕಾಶ್

ಬಹಮನಿ ಸುಲ್ತಾನರ ಉತ್ಸವದ ವಿಚಾರ ವಿವಾದವಾಗುತ್ತಿದ್ದಂತೆ ಎಚ್ಚೆತ್ತಿರುವ ಸಚಿವ ಶರಣ್ ಪ್ರಕಾಶ್, ಉತ್ಸವ ವಿಚಾರದಲ್ಲಿ ಯೂಟರ್ನ್ ಹೊಡೆದಿದ್ದಾರೆ. ಇದು ಸಂಘಟನೆಯವರ ನಿರ್ಧಾರ ಸರ್ಕಾರದ್ದಲ್ಲ ಎಂದಿದ್ದಾರೆ. ಸರ್ಕಾರ ರಾಷ್ಟ್ರಕೂಟ ಉತ್ಸವ ಮಾತ್ರ ಮಾಡುತ್ತಿದೆ. ಬಹಮನಿ ಉತ್ಸವವನ್ನು ಕೆಲ ಸಂಘಸಂಸ್ಥೆಗಳು ನಡೆಸುತ್ತಿವೆ. ಇದಕ್ಕೆ ನನ್ನ ವೈಯಕ್ತಿಗ ಬೆಂಬಲವಿದೆ ಎಂದ ಶರಣಪ್ರಕಾಶ ಪಾಟೀಲ್ ಹೇಳಿದ್ದಾರೆ. ಯಾರೇ ವಿರೋಧಿಸಿದರೂ ಬಹಮನಿ ಉತ್ಸವ ನಿಲ್ಲಿಸುವುದಿಲ್ಲ. ಮಾರ್ಚ್ 6 ರಂದು ನಿಗದಿಯಂತೆ ಬಹಮನಿ ಉತ್ಸವ ನಡೆಯಲಿದೆ ಕಲಬುರ್ಗಿಯಲ್ಲಿ ಸಚಿವರು ಸ್ಪಷ್ಟನೆ ನೀಡಿದ್ದಾರೆ,

Related Articles

Leave a comment

Back to Top

© 2015 - 2017. All Rights Reserved.